Site icon Kundapra.com ಕುಂದಾಪ್ರ ಡಾಟ್ ಕಾಂ

ಬವಳಾಡಿ: ಸಂಸ್ಕೃತ ಸಂಭಾಷಣಾ ಸಪ್ತಾಹ ಶಿಬಿರ ಸಮಾರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶ್ರೀ ಮಕ್ಕಿ ಮಹಾಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಬಹುಳಪುರ, ಈ ಶಿಕ್ಷಣ ಸಂಸ್ಥೆಯ ಸಂಸ್ಕೃತ ಸಂಭಾಷಣಾ ಸಪ್ತಾಹ ಶಿಬಿರ ಸಮಾರೋಪ ಸಮಾರಂಭವು ಬವಳಾಡಿ ಸ.ಹಿ.ಪ್ರಾ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಶಾಲಾ ಮುಖ್ಯ ಶಿಕ್ಷಕ ಎನ್.ಕೆ ಬಿಲ್ಲವ ಅವರು ಮಾತನಾಡಿ ಭಾರತದ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾಷೆಯಾದ ಸಂಸ್ಕೃತವನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಶಾಲಾ ವಿದ್ಯಾರ್ಥಿಗಳ ಸೌಭಾಗ್ಯ ಎಂದರು. ಮುಖ್ಯ ಅತಿಥಿಗಳಾಗಿ ಶಾಲಾ ಎಸ್.ಡಿ.ಎಂ.ಸಿ ನಿಕಟಪೂರ್ವ ಅಧ್ಯಕ್ಷ ಶ್ರೀ ಚನ್ನಯ್ಯ ಪೂಜಾರಿ, ಶಾಲಾ ಶಿಕ್ಷಕರುಗಳಾದ ಕಮಲ, ಶೇಖರ ಶೆಟ್ಟಿ, ರಾಘವೇಂದ್ರ ಕೆ, ಎಸ್.ಡಿ.ಎಂ.ಸಿ ಸದಸ್ಯರು ವೇದಿಕೆಯಲ್ಲಿದ್ದರು.

ಸಂಸ್ಕೃತ ಪಾಠಶಾಲಾ ಮುಖ್ಯಗುರುಗಳಾದ ತಿರುಮಲೇಶ ಭಟ್ ಎಲ್ಲರನ್ನೂ ಸ್ವಾಗತಿಸಿದರು. ಸಂಸ್ಕೃತ ಪಾಠಶಾಲಾ ಶಿಕ್ಷಕಿ ಮಹಾಲಕ್ಷ್ಮಿ ಧನ್ಯವಾದಗೈದರು.

Exit mobile version