Kundapra.com ಕುಂದಾಪ್ರ ಡಾಟ್ ಕಾಂ

ಜೆಸಿಐ ಉಪ್ಪುಂದ ಜೇಸಿ ಸಪ್ತಾಹ 2021 (ಬಂಧನ್) ಉದ್ಘಾಟನೆ ಹಾಗೂ ಮಾಸ್ಕ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಜೆಸಿಐ ಉಪ್ಪುಂದ ಆಶ್ರಯದಲ್ಲಿ ಒಂದು ವಾರಗಳ ಕಾಲ ನೆಡೆಯುವ ಜೇಸಿ ಸಪ್ತಾಹವನ್ನು ಉಪ್ಪುಂದ ಮೀನು ಮಾರುಕಟ್ಟೆಯ ಆವರಣದಲ್ಲಿ ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ಖಾರ್ವಿ ಮಾಸ್ಕ್ ವಿತರಿಸುವುದರ ಮೂಲಕ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷರಾದ ಜೇಸಿ ಪುರುಷೋತ್ತಮದಾಸ್ ಉಪ್ಪುಂದದ ವಿವಿದೆಡೆ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದರು. ಸುಮಾರು 500ಕ್ಕೂ ಹೆಚ್ಚು ಮಾಸ್ಕ್ ಮೊದಲ ದಿನದಂದು ವಿತರಿಸಲಾಯಿತು. ಕಾರ್ಯಕ್ರಮದ ಅತಿಥಿಯಾಗಿ ಯು ಪ್ರಕಾಶ್ ಭಟ್, ವಲಯಾಧಿಕಾರಿ ಸುಬ್ರಮಣ್ಯ ಜಿ., ಸದಸ್ಯರಾದ ವಿಜಯ ಶೆಟ್ಟಿ ರಮೇಶ್ ಜೋಗಿ, ಜಯರಾಜ್ ಖಾರ್ವಿ, ಶ್ರೀಲತಾ ಉಪಸ್ಥಿತರಿದ್ದರು.

ಜಗದೀಶ್ ದೇವಾಡಿಗ ಜೇಸಿವಾಣಿ ವಾಚಿಸಿದರು ಜೇಸಿ ಮಂಜುನಾಥ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು.

Exit mobile version