Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲಾ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘದ ಅಧ್ಯಕ್ಷರಾಗಿ ಹೆಚ್. ರವೀಂದ್ರ ದೇವಾಡಿಗ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜಿಲ್ಲಾ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘದ ಅಧ್ಯಕ್ಷರಾಗಿ ಹೆಚ್ ರವೀಂದ್ರ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ.

ಅವರು ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಿಶೇಷ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಳೆದ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಪಧಾದಿಕಾರಿಗಳಾಗಿ ಬೈಂದೂರು ತಾಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

2011 ರಲ್ಲಿ ರಾಜ್ಯ ಸರ್ಕಾರ ಅವರ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ ಹಾಗೂ 2020ರಲ್ಲಿ ರಾಜ್ಯಮಟ್ಟದ ಡಾ. ಶಾಂತಾ ರಾಧಾಕ್ರಷ್ಣ ಧತ್ತಿ ಪ್ರಶಸ್ತಿ ಸಂದಿದೆ.

Exit mobile version