ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೆಲ್ಕೋ ಫೌಂಡೇಶನ್ ವತಿಯಿಂದ ಆರ್.ಎಮ್.ಬಿ ಯೋಜನೆಯಡಿಯಲ್ಲಿ ವಿದ್ಯುತ್ ವಂಚಿತ ಆಶಾಲತಾ ತೆಕ್ಕಟ್ಟೆ ಅವರ ಅಂಗಡಿಗೆ ಪ್ರಿಡ್ಜ್, ಸೋಲಾರ್ ಹೊಲಿಗೆಯಂತ್ರ ಮತ್ತು ಸೋಲಾರ್ ಪ್ರಿಂಜರ್‌ಗೆ ಸಹಾಯಧನ ನೀಡಲಾಯಿತು.
ತೆಕ್ಕಟ್ಟೆ ಪಂಚಾಯತ್ ಅಧ್ಯಕ್ಷರಾದ ಮಮತಾ ದೇವಾಡಿಗ ಉದ್ಘಾಟಿಸಿ, ಆಶಾಲತಾ ಅವರು ಎಲ್ಲಾ ಮಹಿಳೆಯರಿಗೆ ಮಾದರಿಯಾಗಲಿ ಎಂದು ಹೇಳಿದರು.
ಸೆಲ್ಕೋ ಸಂಸ್ಥೆಯ ಡಿಜಿಎಮ್ ಗುರುಪ್ರಕಾಶ ಶೆಟ್ಟಿ ಮಾತನಾಡಿ, ಸೆಲ್ಕೋ ಸಂಸ್ಥೆಯ ಕಾರ್ಯವೈಖರಿ, ಮಹಿಳಾ ಸಬಲೀಕರಣ ಸಾಮಾಜಿಕ ಕಾಳಜಿ ಮತ್ತು ಸೆಲ್ಕೋನ ವಿವಿಧ ಯೋಜನೆಯ ಬಗ್ಗೆ ತಿಳಿಸಿದರು. ಒಟ್ಟು 1,25,000 ಮೊತ್ತದಲ್ಲಿ 42,000 ಮೊತ್ತವನ್ನು ಸೆಲ್ಕೋ ಫೌಂಡೇಶನ್ ಸಹಾಯಧನವಾಗಿ ನೀಡಿದೆ ಎಂದು ತಿಳಿಸಿದರು.
ಈ ಸಂದರ್ಭ ತೆಕ್ಕಟ್ಟೆ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಮೆ ವ್ಯವಸಾಯ ಸೊಸೈಟಿಯ ಗೋಪಾಲ ಪೂಜಾರಿ, ಕೆನರಾ ಬ್ಯಾಂಕ್‌ನ ಮ್ಯಾನೇಜರ್ ಚಂದ್ರಶೇಖರ, ನಿವೃತ್ತ ಅಧ್ಯಾಪಕಿ ವಿಶಾಲಾಕ್ಷೀ ಶೆಟ್ಟಿ, ಸೆಲ್ಕೋ ಸಂಸ್ಥೆಯ ವಲಯ ಹಿರಿಯ ಪ್ರಬಂಧಕರಾದ ಶೇಖರ ಶೆಟ್ಟಿ, ಶಾಖಾ ಪ್ರಬಂಧಕರಾದ ಮಂಜು ನಾಡ, ಸ್ಥಳೀಯರಾದ ಮಂಜುನಾಥ ಶೆಟ್ಟಿ, ಮಲ್ಯಾಡಿ ರಾಜೀವ ಶೆಟ್ಟಿ, ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿ ವಂದಿಸಿದರು. ಸೆಲ್ಕೋ ಸಂತೋಷ ಸ್ವಾಗತಿಸಿದರು.