Kundapra.com ಕುಂದಾಪ್ರ ಡಾಟ್ ಕಾಂ

ಜೆಇಇ ಮೈನ್ಸ್ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಜೆಇಇ ಮೈನ್ಸ್ 2021 ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 495 ವಿದ್ಯಾರ್ಥಿಗಳು ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆಯುವ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ

ಕೆಟಗರಿ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಜಯಸೂರ್ಯ ಎಂ. ಎಸ್ 147ನೇ ರ‍್ಯಾಂಕ್, ಹರ್ಷಿತಾ ಗಂಗಾದರಪ್ಪ 172ನೇ ರ‍್ಯಾಂಕ್, ಧನರಾಜ 206ನೇ ರ‍್ಯಾಂಕ್, ಶೈಕ್ಷಾ ನಾಯಕ್ 213ನೇ ರ‍್ಯಾಂಕ್, ಪ್ರಜ್ವಲ್ ಆರ್ 350ನೇ ರ‍್ಯಾಂಕ್, ಐಶ್ವರ್ಯ ಎಂ. ಗಸ್ತಿ 955ನೇ ರ‍್ಯಾಂಕ್, ಮಂಜುನಾಥ ಎಸ್ 993 ರ‍್ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿ ಕಿರಣ್ ರೆಡ್ಡಿ ಜೆಇಇ ಆರ್ಕ್ ಹಾಗೂ ಜೆಇಇ ಮೈನ್ಸ್ ನಲ್ಲಿ ಕ್ರಮವಾಗಿ 99.48 ಹಾಗೂ 99.26 ಪರ್ಸನ್ಟೈಲ್ ಗಳಿಸಿದ್ದಾರೆ. ವರುಣ್ ಅನ್ನಸಾಬ್ ಶಿಪುರೆ 99.04, ಸುಜ್ಞಾನ್ ಆರ್ ಶೆಟ್ಟಿ 98.95, ಗುರುರಾಜ್ ಮಹಾದೇವ್ ಮಾದನ್ನಾವರ್ 98.75 ಪರ್ಸನ್ಟೈಲ್ ಪಡೆದಿದ್ದಾರೆ.

95 ಪರ್ಸನ್ಟೈಲ್‌ಗಿಂತಲೂ ಅಧಿಕ 52 ವಿದ್ಯಾರ್ಥಿಗಳು, 90 ಪರ್ಸನ್ಟೈಲ್ ಗಿಂತ ಅಧಿಕ 172 ವಿದ್ಯಾರ್ಥಿಗಳು, 88 ಪರ್ಸನ್ಟೈಲ್ ಗಿಂತ ಅಧಿಕ 211 ವಿದ್ಯಾರ್ಥಿಗಳು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್, ಐಐಟಿ ಸಂಯೋಜಕ ಕೌಶಲ್ ಉಪಸ್ಥಿತರಿದ್ದರು.

Exit mobile version