Kundapra.com ಕುಂದಾಪ್ರ ಡಾಟ್ ಕಾಂ

ಇಡೀ ವಿಶ್ವವೇ ವಿಶ್ವಕರ್ಮನಿಗೆ ಋಣಿಯಾಗಿದ್ದೇವೆ: ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್.

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಂದು ವಿಶ್ವಕರ್ಮ ದಿನ, ವಿಶ್ವಕರ್ಮನು ಪಂಚಬ್ರಹ್ಮರ ಮೂಲಕ, ಲೋಕಕ್ಕೆ ಪಂಚಶಿಲ್ಪ ಕಾರ್ಯಗಳ ಮೂಲಕ ಸೃಷ್ಟಿಯಲ್ಲಿ ಸೃಜನಶೀಲತೆ ನಿರಂತರವಾಗಿ ನಡೆಯುತ್ತಿರುವಂತೆ ನೋಡಿಕೊಂಡವನು. ಇಡೀ ವಿಶ್ವವೇ ವಿಶ್ವಕರ್ಮನಿಗೆ ಋಣಿಯಾಗಿದ್ದೇವೆ ಎಂದು ಬೈಂದೂರು ತಾಲೂಕು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್. ಹೇಳಿದರು.

ಅವರು ಶುಕ್ರವಾರ ಬೈಂದೂರು ತಾಲೂಕು ತಹಶೀಲ್ದಾರ್ ಕಛೇರಿಯಲ್ಲಿ ಸರ್ಕಾರದ ಆದೇಶದಂತೆ ಸರಳವಾಗಿ ವಿಶ್ವಕರ್ಮ ಜಯಂತಿ ಆಚರಿಸಿ, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ ವಿಶ್ವಕರ್ಮ ಜಯಂತಿಯು ವಿಶ್ವಕರ್ಮ ಸಮುದಾಯದವನ್ನು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಅದೇ ರೀತಿ ಸಮುದಾಯದ ಮೂಲಕ ಪಂಚ ಕಸಬನ್ನು ಇನ್ನೂ ಅತ್ಯಂತ ಜನಪ್ರಿಯಗೊಳಿಸಲು ಮತ್ತು ಕಲಾ ಕೌಶ್ಯಲಗಳನ್ನು ಮುಂದಿನ ಪೀಳಿಗೆಗೆ ನೀಡುವಂತಾಗಬೇಕು ಹಾಗೂ ಈ ಸಮಾಜವರು ಶಿಸ್ತು ಸಂಯಮ ತಾಳ್ಮೆ ಜಾಣತನ, ಸಾಮಾಜಿಕ ಬದ್ದತೆಯನ್ನು ರೂಢಿಸಿಕೊಂಡು ಬಂದಿದ್ದಾರೆ ಎಂದರು.

ವಿಶ್ವಕರ್ಮ ಭಾವಚಿತ್ರವನ್ನು ಬೈಂದೂರು ವಿಶ್ವಕರ್ಮ ಯುವ ಸಂಘದ ವತಿಯಿಂದ ಬೈಂದೂರು ತಹಶೀಲ್ದಾರ್ ಕಛೇರಿಗೆ ಕೊಡುಗೆಯಾಗಿ ನೀಡಿದರು.

ಈ ಸಂದರ್ಭ ಉಪತಹಶೀಲ್ದಾರ್ ಲತಾ ಶೆಟ್ಟಿ, ಯಡ್ತರೆ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ಬಿಲ್ಲವ, ವಿಶ್ವಕರ್ಮ ಯುವ ಸಂಘದ ಪದಾಧಿಕಾರಿಗಳಾದ ನಾಗೇಂದ್ರ ಆಚಾರ್, ನಾಗರಾಜ್ ಆಚಾರ್ ಬಂಕೇಶ್ವರ, ಶೇಷಗಿರಿ ಆಚಾರ್ ಯೋಜನಾನಗರ, ಶ್ರೀಧರ್ ಆಚಾರ್ ಪಡುವರಿ, ಸಂತೋಷ್ ಆಚಾರ್ ಬಿಜೂರು, ಸುಕೇಶ್ ಆಚಾರ್ ಹೇರಂಜಾಲು, ಹರೆಗೋಡು ಸುಮಂತ್ ಆಚಾರ್, ಪತ್ರಕರ್ತ ಹರೆಗೋಡು ಸುಶಾಂತ್ ಆಚಾರ್ ಹಾಗೂ ಬೈಂದೂರು ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version