ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರದ ಒಳಗಾದ ರಾಬಿಯಾ ಸೈಫಿಯಾ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ಜಿಲ್ಲಾ ಮುಸ್ಲಿಮ್ ಒಕ್ಕೂಟ ಪ್ರಧಾನ ಮಂತ್ರಿ ಅವರಿಗೆ ಬೈಂದೂರು ತಾಲೂಕು ದಂಡಾಧಿಕಾರಿ ಎಚ್. ಎಸ್. ಶೋಭಾಲಕ್ಷ್ಮಿ ಅವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಹಸನ್ ಮಾವಡ್, ಉಪಾಧ್ಯಕ್ಷರಾದ ಎಚ್. ಎಸ್ ಸಿದ್ದಿಕ್ ಸಾಹೇಬ್ ಶಿರೂರು, ಕೋಶಾಧಿಕಾರಿಗಳಾದ ಶೇಖ್ ಫಯಾಜ್ ಅಲಿ, ಕಾರ್ಯದರ್ಶಿಗಳಾದ ತಬ್ರೇಜ್ ನಾಗೂರ್ ಜೊತೆ ಕಾರ್ಯದರ್ಶಿಗಳಾದ ಅಬು ಅಹಮದ್ ಖೋಕಾ ಹಾಗೂ ಸದಸ್ಯರುಗಳಾದ ಮನೆಗಾರ್ ಜಿಫ್ರಿ ಸಾಹೇಬ್ ಶಿರೂರು, ಸಯ್ಯದ್ ಅಜಮಲ್ ಶಿರೂರು, ಬುವಾಜಿ ಮೊಹಸಿನ್ ಶಿರೂರು, ಮುಗಡಿ ಫಹೀಮ್, ದಬಾಪು ಅಬ್ದುಲ್ ಕಾದಿರ್ ಬೈಂದೂರು, ಝಕರಿಯ ಉಪ್ಪುಂದ, ಸಿರಾಜ್ ಹಲಗೇರಿ, ಸಮಿ ಹಲಗೇರಿ, ಉಪಸ್ಥಿತರಿದ್ದರು