ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಬೈಂದೂರು: ರೈತ ವಿರೋಧಿ ಕಾನೂನು, ಬೆಲೆ ಏರಿಕೆ, ತೈಲ ಬೆಲೆ ಏರಿಕೆಯಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಿಐಟಿಯು ರಾಜ್ಯ ಕಾರ‍್ಯಕಾರಿಣಿ ಮಂಡಳಿ ಸದಸ್ಯ ಕೆ. ಶಂಕರ್ ಹೇಳಿದರು.
ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ರೈತರ ಸಂಯುಕ್ತ ಹೋರಾಟ ಸಮಿತಿ ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಸಿಐಟಿಯು ಹಮ್ಮಿಕೊಂಡ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.
ಸಿಐಟಿಯು ತಾಲೂಕು ಮುಖಂಡ ಎಚ್. ನರಸಿಂಹ, ಹಿರಿಯ ಮುಖಂಡರಾದ ಯು. ದಾಸ ಭಂಡಾರಿ, ಮಹಾಬಲ ವಡೇರಹೋಬಳಿ, ಡಿವೈಎಫ್‌ಐ ಮುಖಂಡ ರಾಜೇಶ್ ವಡೇರಹೋಬಳಿ, ಬೀಮಘರ್ಜನೆ ಸಂಘಟನೆಯ ಮಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೈಂದೂರು: ಕೇಂದ್ರ ಸರಕಾರದ ನೂತನ ಕೃಷಿ ವಿಧೇಯಕಗಳ ವಿರುದ್ದ ನಾನಾ ಸಂಘಟನೆಗಳ ನೇತೃತ್ವದಲ್ಲಿ ರೈತರು ಸೋಮವಾರ ಭಾರತ ಬಂದ್‌ಗೆ ಕರೆ ನೀಡಿದ ಹಿನ್ನಲೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ನಾನಾ ಸಂಘಟನೆಗಳ ವತಿಯಿಂದ ಬೈಂದೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಮುಖಂಡ ಹಾಗೂ ಪ್ರಗತಿಪರ ಕೃಷಿಕ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರವು ರೈತರಿಗೆ ಮಾರಕವಾಗುವ ಮೂರು ಕಾಯಿದೆಗಳನ್ನು ಜಾರಿಗೊಳಿಸಿದೆ. ಇದು ರೈತರ ಹಕ್ಕನ್ನು ಕಸಿದುಕೊಳ್ಳುವ ಕಾಯಿದೆಗಳಾಗಿವೆ. ಇವುಗಳ ವಿರುದ್ದ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಕಾರ್ಮಿಕ ಸಂಘಟನೆ ಮುಖಂಡರಾದ ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ, ನಾಗರತ್ನ ನಾಡ, ರಾಜು ಪಡುಕೋಣೆ, ಶೀಲಾವತಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಗಣೇಶ್ ತೊಂಡೆಮಕ್ಕಿ, ಕಾಂಗ್ರೆಸ್ ಮುಖಂಡರಾದ ಮದನ್ ಕುಮಾರ್, ಮೋಹನ್ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಪಂ ಮಾಜಿ ಸದಸ್ಯ ಜಗದೀಶ್ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಮಂಜುನಾಥ ಪೂಜಾರಿ, ರಾಜೇಶ್ ದೇವಾಡಿಗ, ಮಾಣಿಕ್ಯ ಹೋಬಳಿದಾರ್, ಉದಯ ಪೂಜಾರಿ, ಬಾಬು, ಜೆಡಿಎಸ್ ಮುಖಂಡ ಯು. ಸಂದೇಶ್ ಭಟ್, ಅಂಬೇಡ್ಕರ್ ಸಂಘಟನೆಯ ಲಕ್ಷ್ಮಣ ಯಡ್ತರೆ, ದಯಾನಂದ ಗಣೇಶ ಮೊಗವೀರ, ಅಣ್ಣಪ್ಪ ಪೂಜಾರಿ, ಮಂಜು ಪಡುವರಿ ಮತ್ತಿತರರು ಉಪಸ್ಥಿತರಿದ್ದರು.