ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ, ಬೈಂದೂರು ತಾಲೂಕು ಹವ್ಯಕ ಸಭಾ ರಿ. ಇದರ ಕಾರ್ಯಕಾರಿಣಿ ಸಭೆ ಮತ್ತು ನುಡಿನಮನ ಕಾರ್ಯಕ್ರಮ ಉಪ್ಪುಂದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜರುಗಿತು.
ಹವ್ಯಕ ಸಭಾ ಅಧ್ಯಕ್ಷರಾದ ನಾಗರಾಜ ಭಟ್ ಮಕ್ಕಿ ದೇವಸ್ಥಾನ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ 21ನೇ ಮಹಾಸಭೆಯನ್ನು ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಇತ್ತೀಚಿಗೆ ನಿಧನರಾದ ಆನಗಳ್ಳಿ ವೇದಮೂರ್ತಿ ವೆಂಕಟರಮಣ ಭಟ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ಮೃತರ ಕುರಿತು ಸಂಸ್ಕೃತ ವಿದ್ವಾನ್ ಉಪ್ಪುಂದ ಶಂಕರನಾರಾಯಣ ಭಟ್ಟರು ಮಾತನಾಡಿ ಮೃತರಾದ ವೆಂಕಟರಮಣ ಭಟ್ಟರು ಪಾರಂಪರಿಕ ವೈದಿಕ ವೃತ್ತಿಯನ್ನು ಬಹಳ ಕಷ್ಟದಿಂದ ಮತ್ತು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದರು. ಇವರು ಶ್ರಮಜೀವಿ ಮತ್ತು ಸರಳ ಜೀವ ಶೈಲಿಯನ್ನು ಅನುಸರಿಸಿದ್ದರು, ಅಪಾರ ಶಿಷ್ಯ ವರ್ಗ ಹೊಂದಿರುವ ಇವರ ಅಗಲುವಿಕೆ ಸಮಾಜಕ್ಕೆ ತುಂಲಾರದ ನಷ್ಟ ತಂದಿದೆ ಎಂದು ಹೇಳಿದರು.
ವೇದಮೂರ್ತಿ ಕೃಷ್ಣಭಟ್ ಯರುಕೋಣೆ ಮೃತರ ಬಾವಚಿತ್ರಕ್ಕೆ ಪುಪ್ಪಾರ್ಚನೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯಲ್ಲಿ ಸಮಿತಿ ಸದಸ್ಯರಾದ ಕೆ ಸುಬ್ರಹ್ಮಣ್ಯ ಭಟ್, ಸತ್ಯನಾರಾಯಣ ಪುರಾಣಿಕ, ಸುರೇಶ ಭಟ್, ಉಮೇಶ ಪುರಾಣಿಕ, ವೆಂಕಟರಮಣ ಹೆಗಡೆ, ನವೀನ್ ಕುಮಾರ ಹೆಗಡೆ ಉಪಸ್ಥಿತರಿದ್ದರು. ಹವ್ಯಕ ಸಭಾ ಪ್ರದಾನ ಕಾರ್ಯದರ್ಶಿ ಯು.ಸಂದೇಶ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಶಾಂತಿ ಮಂತ್ರ ಪಠಣ ಮಾಡಲಾಯಿತು.