Site icon Kundapra.com ಕುಂದಾಪ್ರ ಡಾಟ್ ಕಾಂ

ಸ್ವಚ್ಛ ಭಾರತ್ ಮಿಷನ್ ಟ್ವಿಟರ್ ಖಾತೆಯಲ್ಲಿ ವಂಡ್ಸೆ ಗ್ರಾಪಂ ಪೋಟೋ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಕೇಂದ್ರ ಸರಕಾರದ ಸ್ವಚ್ಚ ಭಾರತ್ ಮಿಷನ್ ಟ್ವಿಟರ್ ಖಾತೆಯಲ್ಲಿ ಗಾಂಧಿ ಜಯಂತಿಯ ದಿನದಂದು ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಪಂನ ಕಸ ವಿಲೇವಾರಿ ಪೋಟೋ ಪ್ರಕಟಗೊಂಡಿರುವುದು ಗಮನ ಸೆಳೆದಿವೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ದೇಶದಲ್ಲಿ ಸ್ವಚ್ಛ ಭಾರತ್ ಮಿಷನ್ ೨೦೨೧ರಲ್ಲಿ ೪೩,೬೧೩ ಗ್ರಾಪಂಗಳು ಪ್ಲಾಸ್ಟಿಕ್ ಮಕ್ತಗ್ರಾಮವಾಗಿದೆ ಎಂದು ಉಲ್ಲೇಕಿಸಿ ಅದರಡಿ ವಂಡ್ಸೆ ಗ್ರಾಮದ ಪೋಟೋ ಅಳವಡಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ಗಣ್ಯರು ಲೈಕ್ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಎಸ್‌ಎಲ್‌ಆರ್‌ಎಂ ಘಟಕ ಆರಂಬಿಸಿದ್ದ ಹೆಗ್ಗಳಿಕೆ ವಂಡ್ಸೆ ಗ್ರಾಮ ಪಂಚಾಯತಿಯದ್ದಾಗಿದೆ. ವೇಸ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಹೊಂದಿದೆ. ಒಣ ಕಸ, ಹಸಿ ಕಸ ಪ್ರತ್ಯೇಕಿಸಿ, ಅದರಿಂದ ಬರುವ ಲಾಭದಲ್ಲಿ ನಡೆಯುತ್ತಿರುವ ಏಕೈಕ ಪೂರ್ಣ ಪ್ರಮಾಣದ ಘಟಕ ನಮ್ಮದು. ದೇಶದ ನಾನಾ ಕಡೆಯ ತಜ್ಞರು ಘಟಕಕ್ಕೆ ಭೇಟಿ ನೀಡಿದ್ದಾರೆ.

ಗಾಂಧಿ ಜಯಂತಿಯಂದು ಸ್ವಚ್ಛ ಭಾರತ್ ಟ್ವಿಟರ್ ಖಾತೆಯಲ್ಲಿ ವಂಡ್ಸೆ ಗ್ರಾಪಂನ ಪೋಟೋ ಪ್ರಕಟವಾಗಿರುವುದು ಹೆಮ್ಮೆ ಮೂಡಿಸಿದೆ. – ಅಡಿಕೆಕೊಡ್ಲು ಉದಯಕುಮಾರ್ ಶೆಟ್ಟಿ. ಅಧ್ಯಕ್ಷರು, ವಂಡ್ಸೆ ಗ್ರಾಮ ಪಂಚಾಯತ್

Exit mobile version