Kundapra.com ಕುಂದಾಪ್ರ ಡಾಟ್ ಕಾಂ

ಖಾರ್ವಿಕೇರಿ ಶ್ರೀ ಗಣೇಶೋತ್ಸವ: ರಜತ ಸಿಂಹಾಸನ ಮೆರವಣಿಗೆ

ಕುಂದಾಪುರ: ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ 25ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಅರ್ಪಿಸಲು ಸಿದ್ಧವಾಗಿರುವ ರಜತ ಸಿಂಹಾಸನವನ್ನು ವೈಭವದ ಮೆರವಣಿಗೆಯ ಮೂಲಕ ಮಂಗಳವಾರ ಸಂಜೆ ಕುಂದಾಪುರದ ಖಾರ್ವಿಕೇರಿಗೆ ತರಲಾಯಿತು.

ಕೋಟೇಶ್ವರದಿಂದ ಕುಂದಾಪುರದ ತನಕ ನಡೆದ ವಾಹನಗಳ ಮೆರವಣಿಗೆಯ ಮೂಲಕ ಈ ರಜತ ಸಿಂಹಾಸನವನ್ನು ತರಲಾಯಿತು. ಈ ಸಂದರ್ಭದಲ್ಲಿ ಈ ಸಾಲಿನ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ್ ಖಾರ್ವಿ, ಉಪಾಧ್ಯಕ್ಷ ಸಂದೀಪ್ ಖಾರ್ವಿ ಎಸ್.ಎಸ್. ಕಾರ್ಯದರ್ಶಿ ಅರುಣ್ ಖಾರ್ವಿ ಹಾಗೂ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು, ಗ್ರಾಮಸ್ಥರು ಹಾಜರಿದ್ದರು.

Mahakali temple ganeshotsava2

Exit mobile version