Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಶ್ರೀ ಮೂಕಾಂಬಿಕೆಗೆ ತುಲಾಭಾರ ಸೇವೆ ಸಲ್ಲಿಸಿದ ಸಚಿವ ಸುನಿಲ್‌ ಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಮಹಾಲಯ ಅಮಾವಾಸ್ಯೆಯ ಪರ್ವದಿನವಾದ ಬುಧವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿ ದೇವಿಗೆ ತುಲಾಭಾರ ಸೇವೆ ಸಲ್ಲಿಸಿದರು.

ತುಲಾಭಾರದಲ್ಲಿ ತೂಗಿದ ತಮ್ಮ ತೂಕದ ಜೇನನ್ನು ದೇವಿಗೆ ಅರ್ಪಿಸಿದರು. ದೇವಾಲಯದ ಮುಂದೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಕಾರ್ಯದರ್ಶಿ ಶರತ್‌ಕುಮಾರ ಶೆಟ್ಟಿ, ಬೈಂದೂರು ವಲಯಾಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ ಶೆಟ್ಟಿ ಮತ್ತು ಕಾರ್ಯಕರ್ತರ ಜತೆ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ನಿಮಿತ್ತ ಅವರಿಗೆ ಮತ್ತು ದೇಶಕ್ಕೆ ಒಳಿತಾಗಲೆಂದು ದೇವಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ನಿವೃತ್ತ ಯೋಧ ಯಳಜಿತ ಗಣಪತಿ ಗೌಡ ಅವರನ್ನು ಗೌರವಿಸಿದರು. ಯುವ ಮೋರ್ಚಾ ಹಮ್ಮಿಕೊಂಡಿದ್ದ ಅಗ್ನಿತೀರ್ಥ ನದಿಯ ಸ್ವಚ್ಛತಾ ಅಭಿಯಾನಕ್ಕ ಚಾಲನೆ ನೀಡಿದರು. ದೇವಾಲಯದ ಮೂರ್ತಿ ಕಾಳಿದಾಸ ಭಟ್ಟ ಆಶೀರ್ವಚನಗೈದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ಬಿಜೆಪಿ ಬೈಂದೂರು ಯುವ ಮೋರ್ಚಾ ಅಧ್ಯಕ್ಷ ಸಂತೋಷ್, ಕಾರ್ಯದರ್ಶಿ ಅನುರಾ ಮೆಂಡನ್, ಆಕಾಶ್ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ ಬಟವಾಡಿ, ಸ್ಥಳೀಯ ಮುಖಂಡರಾದ ಜಗದೀಶ ಕೊಲ್ಲೂರು, ಸಂದೀಪ್, ವಿಶ್ವನಾಥ ಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ ಶೆಟ್ಟಿ ಇದ್ದರು ಮತ್ತಿತರರು ಇದ್ದರು.

Exit mobile version