ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.07: ರಾಜ್ಯ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹಾಗೂ ಪತ್ನಿ ವೀಣಾ ನಾಗೇಶ್ ಅವರು ಎಳಜಿತ ಶ್ರೀ ರಾಮಕೃಷ್ಣ ಕುಟೀರಕ್ಕೆ ಬುಧವಾರ ಭೇಟಿ ನೀಡಿದರು.
ಶ್ರೀ ರಾಮಕೃಷ್ಣ ಕುಟೀರದ ಕಾರ್ಯಗಳ ಬಗ್ಗೆ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರಿಂದ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕುಟೀರದಲ್ಲಿ ನಿರಂತರವಾಗಿ ಗ್ರಾಮೀಣ ಪ್ರದೇಶ ಎಲ್ಲಾ ವರ್ಗದ ವಿದ್ಯಾರ್ಥಿಗಳು ನಿತ್ಯಸ್ತೋತ್ರ, ವೇದಮಂತ್ರಗಳ ಪಠಣ, ಸಂಗೀತಾಭ್ಯಾಸ ಮಾಡುತ್ತಿರುವುದು ಹಾಗೂ ಉನ್ನತ ವಿದ್ಯಾಭ್ಯಾಸದ ತನಕವೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನೋಟ್ ಪುಸ್ತಕ ವಿತರಣೆ ಮೊದಲಾದ ಕಾರ್ಯಗಳನ್ನು ಪ್ರತಿವರ್ಷ ಮಾಡುತ್ತಾ ಬರಲಾಗುತ್ತಿರುವ ಬಗ್ಗೆ ತಿಳಿದು ಸೇವಾ ಕಾರ್ಯ ಮುಂದುವರಿಸುವಂತೆ ತಿಳಿಸಿದರು.