Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಹೋಲಿ ರೋಜರಿ ಚರ್ಚ್‌ನ 450ನೇ ವರ್ಷಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹೋಲಿ ರೋಜರಿ ಚರ್ಚ್ ಸ್ಥಾಪನೆಯಾಗಿ 450 ವರ್ಷಗಳಾಗಿರುವುದು ವಿಶೇಷ ಸಂದರ್ಭ. ನಾಲ್ಕು ಶತಮಾನದ ಸಾರ್ಥಕ ಸೇವೆಯ ಇತಿಹಾಸವನ್ನು ಈ ಧರ್ಮ ಕೇಂದ್ರ ಹೊಂದಿದೆ. ಭಕ್ತರಾದ ನಾವುಗಳು ನಿಷ್ಠೆ, ಪ್ರಾಮಾಣಿಕತೆ, ದೇವರ ಇಚ್ಛೆಯಂತೆ ಸತ್ಕಾರ್ಯ, ತ್ಯಾಗ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಮಾತೆ ಮಾರಿಯಮ್ಮವನರ ಸೇವೆಯನ್ನು ಮಾಡುವ ಮೂಲಕ ಜೀವನವನ್ನು ಸಾಕಾರಗೊಳಿಸಿಕೊಳ್ಳುವ ಎಂದು ಶಿವಮೊಗ್ಗ ಬಿಷಪ್ ಡಾ. ಪ್ರಾನ್ಸಿಸ್ ಸೆರಾವೋ ಎಸ್.ಜೆ. ಆಶೀರ್ವಚಿಸಿದರು.

ಅವರು ಕುಂದಾಪುರದ ಹೋಲಿ ರೋಜರಿ ಚರ್ಚ್ 450ನೇ ವರ್ಷಾಚರಣೆಯ ಸಮಾರಂಭವನ್ನು ಉದ್ಘಾಟಿಸಿ, ಸಂದೇಶ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೋ ಆಶೀರ್ವಚಿಸಿದರು.

ಸಮ್ಮಾನ
ಈ ಸಂದರ್ಭ ಉಡುಪಿ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೋ, ಶಿವಮೊಗ್ಗ ಡಾ. ಪ್ರಾನ್ಸಿಸ್ ಸೆರಾವೋ ಎಸ್.ಜೆ., ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್, ಈ ಚರ್ಚ್‌ನಲ್ಲಿ ಧರ್ಮಗುರುಗಳು, ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು, ಧರ್ಮ ಭಗಿನಿಯರು, ದಾನಿಗಳನ್ನು ಸಮ್ಮಾನಿಸಲಾಯಿತು.

ಸ್ಮರಣ ಸಂಚಿಕೆ ಬಿಡುಗಡೆ
ಬರ್ನಾಡ್ ಡಿ’ಕೋಸ್ಟಾ ನೇತೃತ್ವದಲ್ಲಿ ರಚನೆಯಾದ ೪೫೦ ನೇ ವರ್ಷಾಚರಣೆ ಕುರಿತ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಚರ್ಚ್‌ನ ಸಹಾಯಕ ಧರ್ಮಗುರು ಫಾ| ವಿಜಯ್ ಜೆ. ಡಿ’ಸೋಜಾ, ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಕುಲಪತಿ ಸ್ಟ್ಯಾನಿ ಬಿ. ಲೋಬೋ, ಕರ್ನಾಟಕ ಪ್ರೊವಿನ್ಶಿಯಲ್ ಸುಪೀರಿಯರ್ ಸಿ| ಮರಿಯಾ ಶಮಿತಾ, ಪಾಲನಾ ಸಮಿತಿ ಕಾರ್ಯದರ್ಶಿ ಆಶಾ ಕರ್ವಾಲೋ, ೨೦ ಆಯೋಗಗಳ ಸಂಯೋಜಕಿ ಪ್ರೇಮಾ ಡಿ’ಕುನ್ಹಾ, ಮತ್ತಿತರರು ಉಪಸ್ಥಿತರಿದ್ದರು.

ಹೋಲಿ ರೋಜರಿ ಚರ್ಚ್‌ನ ಪ್ರಧಾನ ಧರ್ಮಗುರು ಪಾ| ಸ್ಟ್ಯಾನಿ ತಾವ್ರೋ ಸ್ವಾಗತಿಸಿದರು. ಪಾಲನಾ ಸಮಿತಿ ಉಪಾಧ್ಯಕ್ಷ ಎಲ್.ಜೆ. ಫೆರ್ನಾಂಡೀಸ್ ವರದಿ ವಾಚಿಸಿದರು. ೪೫೦ನೇಯ ವರ್ಷಾಚರಣೆ ಸಮಿತಿ ಕಾರ್ಯದರ್ಶಿ -ಫೆನ್ಸಿಯಾನ್ ಡಿ’ಸೋಜಾ ವಂದಿಸಿದರು.

Exit mobile version