Site icon Kundapra.com ಕುಂದಾಪ್ರ ಡಾಟ್ ಕಾಂ

ಇಕೋ ಕ್ಲಬ್ ಉದ್ಘಾಟನೆ ಮತ್ತು ಗಿಡ ನೆಡುವ ಕಾರ‍್ಯಕ್ರಮ

ಕುಂದಾಪುರ: ಕಲಿಕೆಯೊಂದಿಗೆ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ವಿವಿಧ ಕಾರ‍್ಯಕ್ರಮಗಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟಿನಲ್ಲಿ ಹಮ್ಮಿಕೊಳ್ಳಲಾಯಿತು. ’ವಸುಂಧರಾ’ ಇಕೋ ಕ್ಲಬ್‌ನ್ನು ಶ್ರೀ ಶಾರಾದಾ ಗ್ರಾ.ಪಂ. ಸದಸ್ಯರು ಗಿಡನೆಡುವ ಮೂಲಕ ಚಾಲನೆಗೊಳಿಸಿದರು. ಎಸ್.ಡಿ.ಎಂ. ಸಿ ಅಧ್ಯಕ್ಷರಾದ ಶ್ರೀ ಅಶೊಕ್ ಕಾಮತ್ ಗಿಡಗಳಿಗೆ ನೀರು ಹಾಕಿ, ಮಣ್ಣು ಗೊಬ್ಬರ ನೀಡಿದರು. ಪರಿಸರ ಜಾಗೃತಿ ಎಳೆವೆಯಲ್ಲೇ ಮೂಡಿಸಬೇಕು, ಪರಿಸರ ಜಾಗೃತಿ ಇಂದಿನ ಅಗತ್ಯವೆಂದು ಶ್ರೀಧರ್ ಎಸ್. ಸಿದ್ದಾಪುರ ಮಕ್ಕಳಿಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಅಂಜೂರ, ಮ್ಯಾಂಗೋಸ್ಟಿಯನ್ , ಹಲಸು ವಿವಿಧ ಹಣ್ಣಿನ ಗಿಡ ನೆಡಲಾಯಿತು. ಮಕ್ಕಳನ್ನು ತರಗತಿವಾರು ಗುಂಪು ಮಾಡಿ ಈರುಳ್ಳಿ, ಮೂಲಂಗಿ, ಬೀನ್ಸ್ ಬಿಟ್ರೂಟ್ ಮುಂತಾದ ತರಕಾರಿ ಕೃಷಿ ಮಾಡಲು ಬೇಕಾದ ಸಿದ್ದತೆ ಮಾಡಿಕೊಂಡು ಬೀಜಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳು ಶಾಲಾ ವಠಾರ ಸ್ವಚ್ಛಗೊಳಿಸುವ ಕಾರ‍್ಯ ನೆರವೇರಿಸಿದರು. ಜೊತೆಗೆ ಗೊಬ್ಬರ ತಯಾರಿಸುವ ಪ್ರಾತ್ಯಕ್ಷಿಕೆಯನ್ನು ಪೋಷಕರು ಮಕ್ಕಳಿಗೆ ವಿವರಿಸಿದರು. ಮಕ್ಕಳು ತಿಪ್ಪೆ ಗುಂಡಿಯಲ್ಲಿ ಗೊಬ್ಬರವನ್ನು ತಯಾರಿಸಲು ಸೊಪ್ಪು ಸಂಗ್ರಹಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ ಸ್ವಾಗತಿಸಿರು. ಸಹ ಶಿಕ್ಷಕಿ ಮೀನಾಕ್ಷಿ ವಂದಿಸಿದರು. ಸಹಶಿಕ್ಷಕಿ ಗೀತಾ ಹೆಗ್ಡೆ, ಮಮತಾ ಸಿದ್ದಾಪುರ, ಕಂಪ್ಯೂಟರ್ ಶಿಕ್ಷಕಿ ಸಂಗೀತಾ ಉಪಸ್ಥಿತರಿದ್ದರು.

Exit mobile version