Site icon Kundapra.com ಕುಂದಾಪ್ರ ಡಾಟ್ ಕಾಂ

ಮಲೆನಾಡು ಗಿಡ್ಡ ಜಾತಿಗೆ ಸೇರಿದ ಕರು ಸಾಕಣಿಕೆಗೆ ಗರಿಷ್ಠ ರಿಯಾಯಿತಿ, ಅರ್ಜಿ ಅಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಪ್ರಸಕ್ತ ಸಾಲಿನ ಅಮೃತಧಾರೆ/ಅಮೃತಸಿರಿ ಯೋಜನೆಯಡಿ ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರ ಪುತ್ತೂರು ತಾಲೂಕಿನಿಂದ ಇಲಾಖಾ ಯೋಜನೆಯಡಿ ಮಲೆನಾಡು ಗಿಡ್ಡ ಜಾತಿಗೆ ಸೇರಿದ ಗಂಡು ಕರು ಮತ್ತು ಹೆಣ್ಣು ಕರುಗಳನ್ನು ಸಾಕಣಿಕೆಗಾಗಿ ಗರಿಷ್ಠ ರಿಯಾಯಿತಿ ದರದಲ್ಲಿ ಪಡೆಯಲು ರೈತರಿಗೆ ಅವಕಾಶವಿದ್ದು, ಆಸಕ್ತರು ದಿ. ಅಕ್ಟೋಬರ್ 15ರೊಳಗೆ ತಾಲೂಕು ಪಶು ಆಸ್ಪತ್ರೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ, (ಆಡಳಿತ) ಪಶು ಆಸ್ಪತ್ರೆ, ಉಡುಪಿ(9448134852), ಕಾಪು(9448163237) ಬ್ರಹ್ಮಾವರ( 9448409855), ಕುಂದಾಪುರ(9448850501), ಬೈಂದೂರು(9741638203), ಕಾರ್ಕಳ(9448177345) ಮತ್ತು ಹೆಬ್ರಿ (9986764615) ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆಂದು ಪಶು ಪಾಲನಾ ಇಲಾಖೆಯ ಉಪ ನಿದೇರ್ಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version