Kundapra.com ಕುಂದಾಪ್ರ ಡಾಟ್ ಕಾಂ

ಹೆಣ್ಣು ಗಂಡಿನ ನಡುವಿನ ಅಸಮಾನತೆ ತೊಲಗಬೇಕು: ಡಾ. ಪಾರ್ವತಿ ಜಿ ಐತಾಳ್

ಕುಂದಾಪುರ: ಹೆಣ್ಣು ಮತ್ತು ಗಂಡುವಿನ ನಡುವೆ ಜೈವಿಕ ಭಿನ್ನತೆ ಇದೆ. ಇದರ ಹೊರತಾಗಿ ಇಬ್ಬರು ಸಮಾನರೆ. ಪುರುಷರು ಸಾಂಪ್ರಾದಾಯಿಕ ನಿಯಮ, ಕಟ್ಟಳೆ, ನಂಬಿಕೆಯ ಹೆಸರಿನಲ್ಲಿ ಮಹಿಳೆಯನ್ನು ತಮ್ಮ ಕೈ ಕೆಳಗೆ ಇರುವಂತೆ ಮಾಡಿದರು. ಹೆಣ್ಣು ಗಂಡಿನ ನಡುವೆ ಇರುವ ಅಸಮತೋಲನವನ್ನು ಸರಿಪಡಿಸಬೇಕು. ಸಮಾನತೆ ಮತ್ತು ಸಾಧನೆಯ ನಿಟ್ಟಿನಲ್ಲಿ ಸಮಾಜ ಬೆಳೆಯಬೇಕು. ಅಸಮಾನತೆ ತೊರೆದು, ಸಮಾನತೆಯ ಆಧಾರದ ಮೇಲೆ ಸಮಾಜ ಕಟ್ಟಬೇಕು ಎಂದು ಭಂಡಾರ್‌ಕಾರ್ಸ್ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ| ಪಾರ್ವತಿ ಜಿ ಐತಾಳ್ ಹೇಳಿದರು.

ಅವರು ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ, ಕುಂದಾಪುರ ಇಲ್ಲಿ ನಡೆದ ಮಹಿಳಾ ದೌರ್ಜನ್ಯ ನಿರ್ಮೂಲ ಸಂಘದ ಆಶ್ರಯದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪ್ರಾಂಶುಪಾಲರಾದ ಪ್ರೋ. ದೋಮ ಚಂದ್ರಶೇಖರ್ ಮಾತನಾಡಿ ಅಸಮಾನತೆ ನಿಸರ್ಗ ಸಹಜ ಸಮಾಜದಲ್ಲಿ ಎಲ್ಲರು ಪರಸ್ವರ ಗೌರವದಿಂದ ಕಾಣುವುದು ಮುಖ್ಯ ಎಂಬುದಾಗಿ ತಿಳಿಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆದ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್ ರವರು ವಹಿಸಿ ಶುಭ ಹಾರೈಸಿದರು. ಗಣಕಶಾಸ್ತ್ರ ಪದವಿಯ ಮುಖ್ಯಸ್ಥೆ ನೂತನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಫೀಪಾ ಕಾರ‍್ಯಕ್ರಮ ನಿರೂಪಿಸಿ ಸುಪ್ರೀತ ವಂದಿಸಿದರು.

Exit mobile version