Kundapra.com ಕುಂದಾಪ್ರ ಡಾಟ್ ಕಾಂ

ಶೆಫ್‌ಟಾಕ್‌ಗೆ ಕ್ಯಾಟರಿಂಗ್ ಕಂಪೆನಿ ಆಫ್ ದಿ ಇಯರ್ ಆವಾರ್ಡ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನವದೆಹಲಿಯ ಆಲ್ ಇಂಡಿಯಾ ಬ್ಯುಸಿನೆಸ್ ಡೆವೆಲಪ್‌ಮೆಂಟ್ ಅಸೋಸಿಯೇಷನ್ ಕೊಡಮಾಡುವ ’ಕ್ಯಾಟರಿಂಗ್ ಕಂಪೆನಿ ಆಫ್ ದಿ ಇಯರ್ ಆವಾರ್ಡ್’ ಪ್ರಶಸ್ತ ಸಾಲಿನಲ್ಲಿ ಶೆಫ್‌ಟಾಕ್ ಫುಡ್ & ಹಾಸ್ಟಿಟಾಲಿಟಿ ಸರ್ವಿಸಸ್ ಪ್ರೈ. ಲಿ ಸಂಸ್ಥೆಗೆ ದೊರೆತಿದೆ. ಆಹಾರೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಲಾಗಿರುವ ವಿಶೇಷ ಸೇವೆ ಹಾಗೂ ದೇಶದ ಆರ್ಥಿಕತೆ ಮತ್ತು ಸಮಾಜದ ಅಭಿವೃದ್ಧಿಗೆ ನೀಡಲಾಗಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯ ಮೂಲಕ ಆಹಾರ ಮತ್ತು ಅತಿಥಿ ಸತ್ಕಾರ ವಿಭಾಗದಲ್ಲಿ ಗುಣಮಟ್ಟ ಹಾಗೂ ವೇಗದ ಪ್ರಗತಿ ಸಾಧಿಸಿ ಛಾಪು ಮೂಡಿಸಿರುವ ಡಾ. ಗೋವಿಂದ ಬಾಬು ಪೂಜಾರಿ ಅವರ ಒಡೆತನದ ಶೆಫ್‌ಟಾಕ್ ಸಂಸ್ಥೆಯ ಕೀರ್ತಿ ಮುಕುಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.

ಶೆಫ್‌ಟಾಕ್ ಸಂಸ್ಥೆಗೆ ಈವರೆಗೆ ಹಲವು ಪ್ರಶಸ್ತಿಗಳು ಸಂದಿದ್ದು ಅವುಗಳಲ್ಲಿ ಪ್ರಮುಖವಾಗಿ 2016-17ನೇ ಸಾಲಿನಲ್ಲಿ ಆಲ್ ಇಂಡಿಯ ಅಚೀವರ್ಸ್ ಫೌಂಡೇಶನ್‌ನಿಂದ ‘ನಾಯಕತ್ವ ಹಾಗೂ ಕ್ಷಿಪ್ರ ಬೆಳವಣಿಗೆಯ ಕಂಪೆನಿ’ ಪ್ರಶಸ್ತಿ, ಬಿಸಿಸಿಐ ಮುಂಬೈನಿಂದ ಕ್ಷಿಪ್ರ ಬೆಳವಣಿಗೆಯ ಉದ್ಯಮ ವಿಭಾಗದಲ್ಲಿ ಬಿಜಿನೆಸ್ ಎಕ್ಸ್‌ಲೆಕ್ಸ್ ಅವಾರ್ಡ್ 2019 (ಉದ್ಯಮ ಶ್ರೇಷ್ಠತಾ ಪ್ರಶಸ್ತಿ), 2021ರಲ್ಲಿ ಇಂಟರ್‌ನ್ಯಾಶನಲ್ ಅಚಿವರ‍್ಸ್ ಕಾನ್ಫರೆನ್ಸ್‌ನಲ್ಲಿ ಕ್ವಾಲಿಟಿ ಪುಡ್ ಕಸ್ಟಮರ್ ಸ್ಯಾಟಿಸ್ಪ್ಯಾಕ್ಷನ್ ಅವಾರ್ಡ್ ದೊರೆತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

2008ರಲ್ಲಿ ಮುಂಬೈಯಲ್ಲಿ ಶೆಫ್‌ಟಾಕ್ ಕೇಟರಿಂಗ್ ಸರ್ವಿಸಸ್ ಆರಂಭಿಸಿದ ಡಾ. ಗೋವಿಂದ ಬಾಬು ಪೂಜಾರಿ ಅವರು, 2015ರಲ್ಲಿ ಅದನ್ನು ಶೆಫ್‌ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪೈವೆಟ್ ಲಿಮಿಟೆಡ್ ಆಗಿ ಪರಿವರ್ತಿಸಿದರು. ಈಗ ಪೂನಾ, ಹೈದರಾಬಾದ್, ಬೆಂಗಳೂರು, ಗುಜರಾತ್ ಮೊದಲಾದ ನಗರಗಳಲ್ಲಿ ಇದೇ ಉದ್ಯಮಗಳು ವಿಸ್ತರಿಸಿದ್ದು ಉತ್ತಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಬೆಂಗಳೂರು ಹಾಗೂ ರಾಜ್ಯದ ಇತರ ನಗರಗಳಲ್ಲಿ ಕರ್ನಾಟಕ ಸರಕಾರದ ಹಸಿವು ಮುಕ್ತ ಯೋಜನೆ ಜಾರಿಗೊಳಿಸಿ ಇಂದಿರಾ ಕ್ಯಾಂಟಿನ್ ಆರಂಭಿಸಿದಾಗ ಅದರ ಅರ್ಧದಷ್ಟು ಕ್ಯಾಂಟಿನ್‌ಗಳ ನಿರ್ವಹಣೆ ಹೊಣೆ ಹೊತ್ತು ಸಾವಿರಾರು ಮಂದಿಗೆ ಆಹಾರ ಒದಗಿಸುತ್ತಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version