Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರದ ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಯುವ ದಸರಾ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕುಂದಾಪುರದ ಕೆಡಿಎಫ್ ಕರಾಟೆ & ಫಿಟ್ನೆಸ್ ಅಕಾಡೆಮಿ ಕುಂದಾಪುರ ವಿದ್ಯಾರ್ಥಿಗಳು ಕ್ರಮವಾಗಿ 4 ಚಿನ್ನ 3 ಬೆಳ್ಳಿ ಹಾಗೂ 5 ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಚಿನ್ನದ ಪದಕ ಪಡೆದುಕೊಂಡ ವಿದ್ಯಾರ್ಥಿಗಳಾದ ನವಮಿ ಎಸ್ ಶೆಟ್ಟಿ, ಶ್ರೀಪ್ರಿಯ ಕೆಎಸ್, ಸುಜನ್, ಮಹಮ್ಮದ್ ಅನೀಸ್. ಬೆಳ್ಳಿ ಪದಕ ಗಳಿಸಿದ ವಿದ್ಯಾರ್ಥಿಗಳಾದ ನೋಹ ಮೆಂಡೊನ್ಸಾ, ಆಯುಷ್ ಪುತ್ರನ್, ಸಾಯಿ ವಿಘ್ನೇಶ್ ಹಾಗೇಯೇ ದಕ್ಷ ಕುಮಾರ್ ಶೇರಿಗಾರ್, ಸಚಿನ್, ವಿವೇಕ್ ರಾಮ್ ರಾಯ್ ಪ್ರಭು, ಅರ್ಜುನ್ ಎಸ್ ಶೆಟ್ಟಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಪ್ರೀತೇಶ್, ವಿಶ್ವನಾಥ್ ಉಪ್ಪುಂದ, ಕಿರಣ್ ಕುಂದಾಪುರ, ಸಂದೀಪ್ ವಿ ಕಿರಣ್, ಸಿಹಾನ್ ಶೇಕ್ ಮತ್ತು ಮೊಹಮ್ಮದ್ ಅಫಜಲ್ ಇವರಲ್ಲಿ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದುಕೊಂಡಿದ್ದಾರೆ.

Exit mobile version