Kundapra.com ಕುಂದಾಪ್ರ ಡಾಟ್ ಕಾಂ

ಕಾಡುಕೋಣ ಹತ್ಯೆ ಪ್ರಕರಣ: ಓರ್ವನ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ:
ಶಂಕರನಾರಾಯಣ ವಲಯದ ಹೆಂಗವಳ್ಳಿ ಗ್ರಾಮ ದೊಡ್ಡಬೆಳಾರು ಪ್ರದೇಶದಲ್ಲಿ ಹೆಣ್ಣು ಕಾಡುಕೋಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ರಾಡಿ ಗ್ರಾಮದ ಕಂಡ್ಲೂರು ನಿವಾಸಿ ಗವಂಜಿ ಶಾಹಿದ್ ಬಿನ್ ಗವಂಜಿ ಮಹಮ್ಮದ್ (31) ಎಂಬಾತನನ್ನು ಕುಂದಾಪುರ ಡಿಎಫ್ಓ ಆಶಿಸ್ ರೆಡ್ಡಿ ಮಾರ್ಗದರ್ಶನದಲ್ಲಿ ಶಂಕರನಾರಾಯಣ ಹಾಗೂ ಕುಂದಾಪುರ ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ.

ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಶಂಕರನಾರಾಯಣ ವಲಯದ ವಲಯ ಅರಣ್ಯಾಧಿಕಾರಿ ಚಿದಾನಂದ, ಉಪ ವಲಯ ಅರಣ್ಯಾಧಿಕಾರಿಗಳಾದ ಕೀರ್ತನ್ ಶೆಟ್ಟಿ, ಮಂಜುನಾಥ ನಾಯಕ್, ಅಭಿನಂದನ್ ಹೆಗಡೆ ಅರಣ್ಯ ರಕ್ಷಕರಾದ ರವಿ, ಪ್ರಶಾಂತ್, ರವೀಂದ್ರ ಅರಣ್ಯ ವೀಕ್ಷಕರಾದ ಶಿವಣ್ಣ ಆರ್. ವೇಷಗಾರ್, ಚಂದ್ರು ಎರೇಶಿಮೆ ಮತ್ತು ವಾಹನ ಚಾಲಕ ರವಿ ಭಾಗವಹಿಸಿದ್ದರು.

ಇದನ್ನೂ ಓದಿ:
► ಕಡವೆ ಕೊಂದು ಸಾಗಿಸುತ್ತಿದ್ದ ಇಬ್ಬರ ಬಂಧನ – https://kundapraa.com/?p=53213 .

Exit mobile version