Site icon Kundapra.com ಕುಂದಾಪ್ರ ಡಾಟ್ ಕಾಂ

ತ್ರಾಸಿ: ಅಡಿಕೆ ವ್ಯಾಪಾರಿ ನಿಗೂಢ ನಾಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತುಮಕೂರಿನ ಅಡಿಕೆ ವ್ಯಾಪಾರಿ ವಿವೇಕ್ ಮತ್ತು ಅವರ ತಾಯಿ ಭಾಗ್ಯ ನಿಗೂಢ ನಾಪತ್ತೆಯಾಗಿದ್ದಾರೆ.

ಕಾರು ಚಾಲಕ ಜಾಫರ್ ಖಾನ್ ಎಂಬವರೊಂದಿಗೆ ತುಮಕೂರು ಚಿಕ್ಕನಾಯಕನ ಹಳ್ಳಿಯಿಂದ ಮಂಗಳೂರಿಗೆ ಹೊರಟಿದ್ದ ಇವರು ತ್ರಾಸಿಯಲ್ಲಿ ಕಾಣೆಯಾಗಿದ್ದಾರೆ. ವಿವೇಕ್ ಅವರ ತಂದೆ ವರ್ಷದ ಹಿಂದೆ ತಾಯಿ ಜೊತೆ ಬೊಲೆರೊ ಜೀಪ್‌ನಲ್ಲಿ ಹೊರಟು ಆದಿಚುಂಚನಗಿರಿ ದೇವಳದಲ್ಲಿ ಪೂಜೆ ಸಲ್ಲಿಸಿ ನಂತರ ಮಂಗಳೂರಿಗೆ ಹೋಗಲಿದೆ ಎಂದು ತಿಳಿಸಿ ಕಾರು ಚಾಲಕ ಜಾಫರ್‌ಗೆ ತಿಳಿಸಿ ಹೊರಟಿದ್ದು, ತ್ರಾಸಿಯಿಂದ ಸುಮಾರು 15 ಕಿಮೀ ಹಿಂದೆ ನಿದ್ರೆ ಬರುತ್ತಿದ್ದ ಕಾರಣ ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದರು ಬೆಳಿಗ್ಗೆ 6 ಗಂಟೆಗೆ ಚಾಲಕ ಎದ್ದು ನೋಡುವಾಗ ವಿವೇಕ್ ಮತ್ತು ಅವರ ತಾಯಿ ಕಾಣದಾಗಿದ್ದು, ಮೊಬೈಲ್ ಸ್ವೀಚ್ ಆಪ್ ಆಗಿದೆ.

ಅಡಿಕೆ ವ್ಯಾಪಾರಸ್ಥರಾಗಿದ್ದು, ವ್ಯವಹಾರದಲ್ಲಿ ನಷ್ಟ ಉಂಟಾಗಿ ಹಣದ ಅಡಚಣೆಯಿಂದ ಎಲ್ಲಿಗೋ ಹೋಗಿರಬಹುದೆಂದು ಜಾಫರ್ ಖಾನ್ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version