Kundapra.com ಕುಂದಾಪ್ರ ಡಾಟ್ ಕಾಂ

ಪಂಚಗಂಗಾವಳಿ ಹೊಳೆಯಲ್ಲಿ ಸಾವನ್ನಪ್ಪುತ್ತಿದೆ ಪಂಜರ ಮೀನು. ಕಲುಷಿತ ನೀರು ಕಾರಣ?

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ:
ಪಂಜರ ಮೀನು ಕೃಷಿಯಲ್ಲಿನ ನಷ್ಟದಿಂದ ಸಾವರಿಸಿಕೊಳ್ಳುವ ಹೊತ್ತಿಗೆ ಮತ್ತೆ ಪಂಚರ ಮೀನುಗಳು ಸಾಯುತ್ತಿರುವುದು ಕಂಡುಬಂದಿದೆ. ಕಳೆದ ಮೂರು ದಿನದಿಂದ ಅಲ್ಲೊಂದು ಇಲ್ಲೊಂದು ಪಂಜರ ಮೀನು ಸಾಯುತ್ತಿದ್ದು ಭಾನುವಾರ ಸಾವುಗಳ ಸಂಖ್ಯೆ ದಿಢೀರಾಗಿ ಹೆಚ್ಚಿಗಿದ್ದು ಕೃಷಿಕರನ್ನು ಆತಂಕಕ್ಕೆ ನೂಕಿದೆ.

ಕಳೆದ ಬಾರಿ ಬೈಂದೂರು ಹಾಗೂ ಕುಂದಾಪುರ ಪರಿಸರದಲ್ಲಿ ಮೀನುಗಳ ಸಾವಾಗಿದ್ದು ಈ ಬಾರಿ ಕುಂದಾಪುರದ ಪಂಚಗಂಗಾವಳಿ ಹೊಳೆಯಲ್ಲಿ ಪಂಜರ ಮೀನುಗಳ ಸಾವು ಹೆಚ್ಚಾಗಿ ಕಂಡುಬಂದಿದೆ.

ಪಂಜಗಂಗಾವಳಿ ಸಂಗಮ ಪರಿಸರದಿಂದ ಬೊಬ್ಬುಕುದ್ರು ತನಕ ನೂರಾರು ಪಂಜರದಲ್ಲಿ ಮೀನು ಸಾಕಣೆ ಮಾಡಿದ್ದು ಬರೋಬ್ಬರಿ ಒಂದು ಕೆಜಿ ತನಕ ತೂಕ ಬಂದ ಮೀನು ಸಾಯುತ್ತಿವೆ. ಹತ್ತಾರು ಕುಟುಂಬಗಳು ಪಂಜ ಮೀನು ಸಾಕಣಿಕೆಯಿಂದ ಬದುಕು ಕಟ್ಟಿಕೊಂಡಿದ್ದು, ಅಚಾನಕ್ ಸಾವುನಿಂದ ಕಂಗೆಟ್ಟಿದ್ದಾರೆ. ನಿಗೂಢವಾಗಿ ಸತ್ತ ಮೀನುಗಳ ಹೊಂಡ ತೆಗೆದು ಹೂಳುತ್ತಿದ್ದಾರೆ.

ಕಲುಷಿತ ನೀರು ಮೀನು ಸಾವಿಗೆ ಕಾರಣ?
ಪಂಜರದ ಮೀನು ಸಾವಿಗೆ ಕುಲಷಿತ ನೀರೇ ಕಾರಣ ಎಂದು ಕೃಷಿಕರು ಆರೋಪಿಸಿದ್ದಾರೆ. ಹೋಟೆಲ್, ಆಸ್ಪತ್ರೆ ಸಮುಚ್ಚಯದ ನೀರು ಪರಿಷ್ಕರಿಸದೆ ನೇರವಾಗಿ ಹೊಳೆ ಬಿಡುತ್ತಿರುವುದರಿಂದ ನೀರಿನಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಉಸಿರಾಡಲಾಗದೆ ಮೀನುಗಳು ಸಾಯುತ್ತಿವೆ ಎಂದು ಪಂಜರ ಮೀನು ಕೃಷಿಕರು ದೂರಿದ್ದಾರೆ. ಹೊಟೇಲ್ ತ್ಯಾಜ್ಯನೀರು ರೀಸೈಕಲಿಂಗ್ ಮಾಡಿ ಬಿಡಬೇಕು ಎನ್ನುವ ನಿಯಮ ಕೂಡಾ ಪಾಲನೆ ಆಗುತ್ತಿಲ್ಲ. ಆಸ್ಪತ್ತೆ ತ್ಯಾಜ್ಯ ರಸಾಯನಿಕ ನೀರು ಹೊಳೆ ಸೇರುವುದರಿಂದ ಪಂಜರ ಮೀನುಗಷ್ಟೇ ಅಲ್ಲ ಜಲಜರಗಳಿಗೂ ಗಂಡಾಂತರಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕೋಟ್ಯಾಂತರ ವೆಚ್ಚದ ಯುಜಿಡಿ ಕಾಮಗಾರಿ ಹಳ್ಳಹತ್ತಿದ್ದರಿಂದ ಕುಲಷಿತ ನೀರಿನ ಸಮಸ್ಯೆ ಸದ್ಯಕ್ಕೆ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ. ಕಳೆದ ಭಾರಿ ಮೀನುಗಳ ಸಾವಿನ ಬಗ್ಗೆ ಅಧಿಕಾರಿಗಳು ಕಾರಣ ಪತ್ತೆ ಮಾಡಿದ್ದು, ಕಲುಷಿತ ನೀರು ಕಾರಣ ಎಂದು ವರದಿ ಬಂದಿತ್ತು.

ಮೀನುಗಾರಿಕಾ ಸಚಿವನಾಗಿದ್ದ ಕಾಲದಲ್ಲಿ ಪಂಜರ ಮೀನು ಸಾವು ಸಂಭವಿಸಿದ್ದು, ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಸಂಶೋಧನೆ ಜೊತೆ ಮೀಗಳ ಸಾವಿನ ಹಿನ್ನೆಲೆ ವರದಿ ಕೊಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಮೀನುಗಳ ಸಾವಿನ ಬಗ್ಗೆ ಸಂಶೋಧನೆ ಮಾಡಿ, ವರದಿ ನೀಡಿದ್ದು, ಕುಲಷಿತ ನೀರೇ ಮೀನುಗಳ ಸಾವಿಗೆ ಕಾರಣ ಎಂದು ವರದಿ ನೀಡಿದ್ದಾರೆ. ಪಂಜರ ಮೀನು ಸಾವಿನ ಹಿನ್ನೆಲೆಯಲ್ಲಿ ನಷ್ಣಕ್ಕೆ ಒಳಗಾದ ಮೀನು ಕೃಷಿಕರಿಗೆ ಇಲಾಖೆ ಮೂಲಕ ಮೀನು ಮರಿ ತೆಗೆದುಕೊಳ್ಳಲು ಸಹಾಕಾರ ನೀಡಲಾಗಿತ್ತು. ಪಂಜರ ಮೀನು ಸಾವಿನ ಹಿನ್ನೆಲೆಯಲ್ಲಿ ಸಚಿವ ಹಾಗೂ ಸರ್ಕಾರ ಗಮನ ಸೆಳೆಯುತ್ತೇನೆ – ಕೋಟ ಶ್ರೀನಿವಾಸ ಪೂಜಾರಿ, ಸಚಿವರು

Exit mobile version