Kundapra.com ಕುಂದಾಪ್ರ ಡಾಟ್ ಕಾಂ

ಜನ್ಮಶತಮಾನಂಗಳದಲಿ ಶ್ರೀ ಗೋವಿಂದ ಬಿಜೂರ್ ಪುಸ್ತಕ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತನ್ನ ಸಾತ್ವಿಕ ಹಾಗೂ ಧೀಮಂತ ವ್ಯಕ್ತಿತ್ವದ ಮೂಲಕ ಸಾಮಾಜಿಕ ಅಭಿವೃದ್ಧಿ ಯಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ ಗೋವಿಂದ ಬಿಜೂರ್ ಅವರು ಬಗ್ಗೆ ಅವರು ಪುತ್ರಿ, ನಿವ್ರತ್ತ ಶಿಕ್ಷಕಿ ಶಶಿಕಲಾ ಬಿಜೂರ್ ಪುಸ್ತಕ ಪ್ರಕಟಿಸಿರುವುದು ಅಭಿನಂದನೀಯವಾಗಿದೆ. ಕುಂದಾಪುರದ ಕೆಲವು ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಂದಿನ ಪೀಳಿಗೆಯವರಿಗೆ ತಿಳಿದಿಲ್ಲ. ಇಂತಹ ಪುಸ್ತಕಗಳು ಪ್ರಕಟವಾದಾಗ ಅವರ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಜನ್ಮಶತಮಾನಂಗಳದಲ್ಲಿ ಗೋವಿಂದ ಬಿಜೂರ್ ಪುಸ್ತಕ ಬಿಡುಗಡೆ ಮಾಡುತ್ತಾ ಖ್ಯಾತ ವಕೀಲರೂ ಸಾಹಿತಿಗಳೂ ಆದ ಎ ಎಸ್.ಎನ್.ಹೆಬ್ಬಾರ್ ಹೇಳಿದರು.

ಅವರು ಕುಂದಾಪುರದ ಬಿ ಆರ್ ರಾಯರ ಹಿಂದೂ ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ,ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಂದಪ್ರಭ ಸಂಪಾದಕ ಯು.ಎಸ್.ಶೆಣೈ ಮಾತನಾಡಿ ಗೋವಿಂದ ಬಿಜೂರ್ ಓರ್ವ ಅಪರೂಪದ ಸಾತ್ವಿಕ ಸ್ವಭಾವದ ಧೀಮಂತ ನಾಯಕ.ತಮ್ಮ ಸರಳತೆ,ಸಜ್ಜನಿಕೆ, ಸಮಾಜಾಭಿವ್ರೃದ್ಧಿಯ ಕಾಳಜಿಯಿಂದ ಜನಮೆಚ್ಚುಗೆ ಗಳಿಸಿದವರು.ಭಾರತೀಯ ಸಂಸ್ಕ್ರತಿ ಉಳಿಸಿ ಬೆಳೆಸುವಲ್ಲಿ ,ಕುಟುಂಬ ಸದಸ್ಯರೊಂದಿಗೆ ಅವರು ನಡೆಸಿದ ಚಟುವಟಿಕೆಗಳು ಫಲ ನೀಡಿದೆ. ತಂದೆಯ ಬಗ್ಗೆ ಪುಸ್ತಕ ಪ್ರಕಟಿಸಿರುವ ಶಶಿಕಲಾ ಬಿಜೂರ್ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದರು.

ಈ ಸಂದರ್ಭ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಮನೋಹರ್, ನಿವ್ರತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಉಬ್ಬೇರಿ, ಮಾಣಿಗೋಪಾಲ್ ಉಪಸ್ಥಿತರಿದ್ದರು. ಲೇಖಕಿ ಶಶಿಕಲಾ ಬಿಜೂರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಶ್ರೀ ಸುಂದರ ನಿರೂಪಿಸಿದರು. ಅರವಿಂದ ಬಿಜೂರ್ ವಂದಿಸಿದರು.

Exit mobile version