Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂನಾದ್ಯಂತ ಸಂಭ್ರಮದ ಗಣೇಶೋತ್ಸವ

ಕುಂದಾಪುರ: ವಿಘ್ನನಿವಾರಕ ಶ್ರೀ ವಿಫ್ನೇಶ್ವರನ ಆರಾಧನೆ ಎಲ್ಲೆಡೆಯೂ ಸಂಭ್ರಮ, ಸಡಗರದಿಂದ ಜರುಗುತ್ತಿದೆ. ತಾಲೂಕಿನ ಪ್ರಮುಖ ವಿನಾಯಕ ದೇವಸ್ಥಾನಗಳಾದ ಆನೆಗುಡ್ಡೆ, ಹಟ್ಟಿಯಂಗಡಿ ಸೇರಿದಂತೆ ಇತರ ಗಣಪತಿ ದೇವಾಲಯಗಳಲ್ಲಿ ವಿಶೇಷ ಹೋಮ, ಹವನ, ಪೂಜಾಕೈಂಕರ್ಯಗಳು ಜರುಗುತ್ತಿದ್ದೇ, ಸಾರ್ವಜನಿಕ ಗಣೇಶೋತ್ಸವದಲ್ಲೂ ಗಣಪತಿಯನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪೂಜಿಸಲಾಗುತ್ತಿದೆ.

ಕುಂದಾಪುರ ತಾಲೂಕಿನಲ್ಲಿ ಸುಮಾರು 80ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕವಾಗಿ ಗಣಪತಿಗಳನ್ನು ಪ್ರತಿಷ್ಠಾಪಿಸಿದ್ದರೇ, ಹಲವು ಮನೆ, ಅಂಗಡಿಗಳಲ್ಲಿಯೂ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ.

ಆನೆಗುಡ್ಡೆ, ಹಟ್ಟಿಯಂಗಡಿ ಮುಂತಾದೆಡೆಗಳಲ್ಲಿ ಭಕ್ತರ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಕುಂದಾಪುರದ ರಾಮಕ್ಷತ್ರಿಯ ಯುವಕ ಮಂಡಲದ ಗಣೇಶೋತ್ಸವವು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದರೇ, ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಳದ ಗಣೇಶೋತ್ಸವ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು ಕುಂದಾಪುರ ನಗರವನ್ನು ಸಿಂಗರಿಸಲಾಗಿದೆ.

***

ಕುಂದಾಪುರದ ಶ್ರೀ ಮಹಾಕಾಳಿ ದೇವಸ್ಥಾನ, ರಾಮಕ್ಷತ್ರಿಯ ಯುವಕ ಮಂಡಳಿ, ಕುಂದೇಶ್ವರ ದೇವಸ್ಥಾನ, ನೇರಂಬಳ್ಳಿ ವಿಫ್ನೇಶ್ವರ ಯುವಕ ಮಂಡಲ, ಹಂಗಳೂರು ವಿನಾಯಕ ಮಿತ್ರವೃಂದ, ವಂಡೇರಹೋಬಳಿ ಬಿ.ಸಿ. ರಸ್ತೆ ಶ್ರೀ ವಿಘ್ನೇಶ್ವರ ಯುವಕ ಮಂಡಳಿ, ಕೋಟೇಶ್ವರ, ವಂಡ್ಸೆ, ಚಿತ್ತೂರು, ತಗ್ಗರ್ಸೆ, ಬೈಂದೂರು ಮುಂತಾದೆಡೆ ಪೂಜಿತ ಗಣಪತಿ ಚಿತ್ರಗಳು


 

 

Exit mobile version