Site icon Kundapra.com ಕುಂದಾಪ್ರ ಡಾಟ್ ಕಾಂ

ಬೆಲೆ ಏರಿಕೆ ಮರೆಮಾಚಲು ಬಿಜೆಪಿ ನಾಯಕರ ವಿವಾದಾಸ್ಪದ ಹೇಳಿಕೆ: ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತೀವ್ರ ಬೆಲೆ ಏರಿಕೆ ಮರೆಮಾಚಲು ಬಿಜೆಪಿ ನಾಯಕರು ವಿವಾದಾಸ್ಪದ ಹೇಳಿಕೆ ನೀಡುತ್ತಿರುವುದು ತೀವ್ರ ಖಂಡನೀಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಖಂಡಿಸಿದ್ದಾರೆ.

ನಿರಂತರ ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲಾ ಅಗತ್ಯವಸ್ತು, ಕಟ್ಟಡ ಸಾಮಗ್ರಿಗಳ ಬೆಲೆ ಗಣನೀಯ ಏರಿಕೆಯಾಗಿದೆ. ಸ್ವಾತಂತ್ಯ ನಂತರ ದೇಶದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರಕಾರ ಬೆಲೆಯೆರಿಕೆ ಸಂದರ್ಭದಲ್ಲಿ ಈ ರೀತಿ ಕೈ ಕಟ್ಟಿ ಕುಳಿತುಕೊಂಡಿಲ್ಲ .ದೇಶದ ಜನತೆ ತಾವು ಏನು ಮಾಡಿದರು ನಮಗೆ ನಿರಂತರ ಮತ ನೀಡುತ್ತಾರೆ ಎನ್ನುವ ಮನಸ್ಥಿತಿಯಿಂದ ಪ್ರಧಾನಿ ಮತ್ತು ಬಿಜೆಪಿ ಸರಕಾರ ಈ ರೀತಿ ವರ್ತಿಸುತ್ತಿದ್ದಾರೆ. ಇವರ ಏಳು ವರ್ಷದ ಆಡಳಿತದಲ್ಲಿ ದೇಶದ ಜನರ ಆರ್ಥಿಕ ಸ್ಥಿತಿ 15 ವರ್ಷ ಹಿಂದಕ್ಕೆ ತಳ್ಳಲ್ಪಟ್ಟಿದೆ. ಕಾರ್ಮಿಕರ ,ಕ್ರಷಿಕರ, ಮಧ್ಯಮ ವರ್ಗದವರ ಪರಿಸ್ಥಿತಿ ತೀವ್ರ ಶೋಚನೀಯವಾಗಿದೆ ಎಂದು ಆಗ್ರಹಿಸಿದ್ದಾರೆ.

ದೇಶದ ಜನತೆ ಇಂತಹ ಪರಿಸ್ಥಿತಿಯಲ್ಲಿರುವಾಗ ಸರಕಾರ ಮಧ್ಯಪ್ರವೇಶಿಸಿ ಇಂಧನ ಬೆಲೆ ಕಡಿಮೆ ಮಾಡಬೇಕು. ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲದ ಬೆಲೆ ಏರಿಕೆ ನೆಪ ಹೇಳಿ ಮೌನವಾಗಿರುವುದಾದರೆ ದೇಶದ ಪ್ರಜೆಯ ಜೀವನ, ಜೀವ ಮತ್ತು ಗೌರವ ಉಳಿಸಬೇಕಾದ ಪ್ರಜಾಪ್ರಭುತ್ವ ಸರಕಾರದ ಜೌಚಿತ್ಯವನ್ನು ಪ್ರಶ್ನಿಸುವ ಕಾಲ ಕೂಡಿ ಬಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ನಳಿನ್ ಕುಮಾರ್ ಕಟೀಲ್ ಹೇಳಿಕೆ ಬಿಜೆಪಿ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ವೇಳೆ ದುರುದ್ದೇಶದಿಂದ ನೀಡಿದ ಹೇಳಿಕೆಯಾಗಿದೆ.ನಳಿನ್ ಕಟೀಲ್ ರವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕುರಿತು ಅವಾಚ್ಯ ಶಬ್ದ ಬಳಕೆ ಮಾಡಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಯನ್ನು ಸಾಮಾನ್ಯ ಜ್ಞಾನ ಇಲ್ಲದವರಷ್ಟೇ ನೀಡಬಲ್ಲರು ಎಂದು ಖಂಡಿಸಿದರು.

Exit mobile version