Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಕಶ್ವಿ ಚೆಸ್ ಸ್ಕೂಲ್‌ನಲ್ಲಿ ಚೆಸ್ ಪಂದ್ಯಾಟ, ಬಹುಮಾನ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಕಶ್ವಿ ಚೆಸ್ ಸ್ಕೂಲ್‌ನಲ್ಲಿ ಓಪನ್ ರ‍್ಯಾಪಿಡ್ ಚೆಸ್ ಪಂದ್ಯಾವಳಿ ನಡೆಯಿತು.

ಮುಕ್ತ ವಿಭಾಗದ ಚೆಸ್ ಪಂದ್ಯಾಟದಲ್ಲಿ ಕಶ್ವಿ ಚೆಸ್ ಸ್ಕೂಲ್‌ನ ವಿದ್ಯಾರ್ಥಿಗಳಾದ ನಿಶಾಂತ್ ಡಿಸೋಜ್ ಪ್ರಥಮ ಸ್ಥಾನ, ದಿವ್ಯ ದ್ವೀತಿಯ ಸ್ಥಾನ ಕಾರ್ತಿಕ್ ತೃತೀಯ ಸ್ಥಾನಗಳಿಸಿದರು. ಗೋಲ್ಡನ್ ಗ್ರೂಪ್ನ ಮುಕ್ತ ವಿಭಾಗದಲ್ಲಿ ಮನನ್ ಶೆಟ್ಟಿ ಪ್ರಥಮ ಸ್ಥಾನ, ಸನತ್ ಎಸ್. ಸಿರಿಯಾನ್ ದ್ವಿತೀಯ ಸ್ಥಾನ, ಹರಿದಾಸ್ ಆರ್. ಮಲ್ಯ ತೃತೀಯ ಸ್ಥಾನಗಳಿಸಿದರು. ಹಾಗೂ ಸ್ಟಾರ್ ಗ್ರೂಪ್‌ನ ಮುಕ್ತ ವಿಭಾಗದಲ್ಲಿ ರೀತೇಶ್ ವಿ. ಪ್ರಭು ಪ್ರಥಮ ಸ್ಥಾನ, ತೇಜಸ್ ದ್ವಿತೀಯ ಸ್ಥಾನ, ನವಮ್ ಹೆಗ್ಡೆ ತೃತೀಯ ಸ್ಥಾನ ಪಡೆದರು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ ಕೋಟೇಶ್ವರ ಅಂಕದಕಟ್ಟೆಯ ಸುಧನ್ವ ಮಲ್ಟಿ ಕಲ್ಚರಲ್ ಅಂಡ್ ಕೋಚಿಂಗ್ ಸೆಂಟರ್ ಸಂಸ್ಥಾಪಕರಾದ ಸುಮಲತಾ ಶೆಟ್ಟಿ ಅವರು ಮಾತನಾಡಿ, ಚೆಸ್ ಕಲಿಕೆ ಮತ್ತು ಆಟವು ವಿದ್ಯಾರ್ಥಿಗಳನ್ನು ಬೌದ್ಧಿಕ ಮತ್ತು ಶಾರೀರಿಕವಾಗಿ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಕಶ್ವಿ ಚೆಸ್ ಸ್ಕೂಲ್‌ನ ಸಂಸ್ಥಾಪಕರಾದ ನರೇಶ್ ಬಿ., ಕಶ್ವಿ ಚೆಸ್ ಸ್ಕೂಲ್‌ನ ವಿದ್ಯಾರ್ಥಿಯಾದ ನಿಶಾಂತ್ ಡಿಸೋಜಾ ಉಪಸ್ಥಿತರಿದ್ದರು. ಕಶ್ವಿ ಚೆಸ್ ಸ್ಕೂಲ್‌ನ ತರಬೇತುದಾರರಾದ ಅಣ್ಣಪ್ಪ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು. ಚೆಸ್ ಪಂದ್ಯಾವಳಿಯನ್ನು ಕಶ್ವಿ ಚೆಸ್ ಸ್ಕೂಲ್‌ನ ತರಬೇತುದಾರರಾದ ರೂಪ ಶೆಟ್ಟಿ ಮತ್ತು ಧನ್ರಾಜ್ ಬಸ್ರೂರು ನಡೆಸಿಕೊಟ್ಟರು.

Exit mobile version