Kundapra.com ಕುಂದಾಪ್ರ ಡಾಟ್ ಕಾಂ

ಮಹಿಳೆಯರಿಗೆ ಇಷ್ಟವಾಗದ ಸಂಗಾತಿಯ ಈ ಗುಣಗಳು!

ಮಹಿಳೆಯರು ಯಾವಾಗಲೂ ಚೂಸಿ ಅಂದರೆ ತಪ್ಪಾಗಲಾರದು, ತುಂಬಾ ಯೋಚನೆ ಮಾಡಿ ಎಲ್ಲವನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರ ಮೇಲೂ ಬೇಗನೆ ನಂಬಿಕೆ ಬರುವುದಿಲ್ಲ

ತುಂಬಾ ಸಮಯದ ನಂತರ ಆಲೋಚನೆ ಮಾಡಿ ಪ್ರತಿಯೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲವೂ ಇಷ್ಟೊಂದು ಚೂಸಿ ಆಗಿರುವ ಮಹಿಳೆಯರು ಇನ್ನು ತಮ್ಮ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಸುಮ್ಮನಿರುವುದಿಲ್ಲ ಎಲ್ಲವೂ ಅಳೆದು ತೂಗಿ ಸಂಬಂಧವನ್ನು ಗಟ್ಟಿಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಹುಡುಗರು ಮಾಡುವ ಕೆಲವೊಂದು ವಿಚಾರಗಳು ಹುಡುಗಿಯರಿಗೆ ನೋವುಂಟಾಗುವುದು. ನೀವು ಮಾಡುವ ಕೆಲವೊಂದು ವಿಚಾರಗಳು ಹುಡುಗಿಯರಿಗೆ ಹಿಡಿಸದೇ ಹೋಗಬಹುದು. ಇಂತಹ ಸಮಯದಲ್ಲಿ ನೀವು ಯಾವುದು ಆಕೆಗೆ ಇಷ್ಟವಲ್ಲ ಎಂಬುದನ್ನು ಅರಿಯುವುದು ತುಂಬಾ ಮುಖ್ಯ. ಅದಕ್ಕಾಗಿ ಈ ಲೇಖನ ನಿಮಗಾಗಿ ಹಲವು ವಿಚಾರಗಳನ್ನು ತಿಳಿಸಿದ್ದೇವೆ.

ನಕಾರಾತ್ಮಕ ಯೋಚನೆ:
ಯಾವುದೇ ವಿಚಾರದಲ್ಲಿ ನಕಾರಾತ್ಮಕ ಮಾತು ಅವರಲ್ಲಿನ ಆತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ಅದಲ್ಲದೇ ಹುಡುಗಿಯರು ಯಾವಾಗಲೂ ಗಮನಿಸುವಂತಹ ವಿಚಾರವೆಂದರೆ ತಮ್ಮ ಬಗ್ಗೆ, ಕುಟುಂಬದ ಬಗ್ಗೆ, ಸ್ನೇಹಿತರು, ಕಚೇರಿ ಇತ್ಯಾದಿಗಳ ಬಗ್ಗೆ ತಮ್ಮ ಸಂಗಾತಿ ಯಾವ ರೀತಿ ಮಾತನಾಡುವರು ಎಂದು. ಈ ವಿಚಾರಗಳ ಬಗ್ಗೆ ನೀವು ನಕಾರಾತ್ಮಕವಾಗಿ ಮಾತನಾಡುತ್ತಲಿದ್ದರೆ, ಆಗ ನಿಮ್ಮ ಸಂಗಾತಿಗೆ ಇದು ಹಿಡಿಸದೆ ಇರಬಹುದು. ನಕಾರಾತ್ಮಕವಾಗಿ ಮಾತನಾಡುವುದು ಅಸಂತೋಷ, ಅಭದ್ರತೆಯ ಸಂಕೇತವಾಗಿದೆ ಇಂತವರ ಸಂಗದಿಂದ ಏನು ಲಭಿಸದು ಎಂಬ ಮನೋಭಾವಕ್ಕೆ ನಿಮ್ಮ ಹುಡುಗಿ ಬರುವಳು.

ಗೊಂದಲದಿಂದಿರುವುದು:
ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಗೊಂದಲವಿದ್ದರೆ ಹಾಗೂ ನೀವು ನಿಮ್ಮ ಹುಡುಗಿಯ ಜತೆಗೆ ಮಾತನಾಡುವ ವೇಳೆ ಗೊಂದಲದಲ್ಲಿದ್ದರೆ, ಆಕೆಯೊಂದಿಗೆ ಮಾತನಾಡುವುದನ್ನು ಕಡೆಗಣಿಸುತ್ತಿದ್ದರೆ ಅಥವಾ ಮಾತನ್ನು ಮಧ್ಯದಲ್ಲೇ ನಿಲ್ಲಿಸುತ್ತಿದ್ದರೆ ಇದು ನಿಮ್ಮ ಹುಡುಗಿಗೆ ಇಷ್ಟವಾಗದೇ ಇರಬಹುದು. ಹೆಣ್ಣು ಯಾವಾಗಲೂ ತನ್ನನ್ನು ಪ್ರೀತಿಸುವಾತ ತನ್ನ ಮೇಲೆ ಹೆಚ್ಚು ಆಸಕ್ತಿ ಹೊಂದಿರಬೇಕು ಎಂದು ಭಾವಿಸುತ್ತಾಳೆ. ಗೊಂದಲದಲ್ಲಿರುವಂತಹ ಪುರುಷನ ಜತೆಗೆ ಸಂಬಂಧ ಬೆಳೆಸುವುದು ಒಳ್ಳೆಯದಲ್ಲ ಮತ್ತು ಆತ ತನಗೆ ಹೆಚ್ಚು ಗಮನ ನೀಡುವುದಿಲ್ಲವೆಂದು ಹುಡುಗಿ ಭಾವಿಸುವಳು. ಅದಕ್ಕೆ ನಿಮ್ಮ ಹುಡುಗಿಯ ಜೊತೆಗೆ ಸಮಯ ಕಳೆಯಲು ಪ್ರಯತ್ನಿಸಿ.

ಅಸಭ್ಯತೆ ತೋರುವುದು:
ಕೆಲವು ಹುಡುಗರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎಂಬುದರ ಅರಿವೆಯೇ ಇರುವುದಿಲ್ಲ. ತಮ್ಮ ಸ್ನೇಹಿತರ ಜೊತೆ ಇದ್ದ ಹಾಗೆಯೇ ಎಲ್ಲಾ ಕಡೆಯೂ ವರ್ತನೆ ಮಾಡುತ್ತಿರುತ್ತಾರೆ. ಒಂದು ಗುಂಪಿನಲ್ಲಿ ಹೇಗೆ ಮಾತನಾಡಬೇಕು, ಹೊರಗಡೆ ಹೋಟೆಲ್ ಅಥವಾ ಸಿನಿಮಾ ಹಾಲ್ ನಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿದಿರುವುದಿಲ್ಲ. ಇದು ಮಹಿಳೆಯರಿಗೆ ಇಷ್ಟವಾಗದು. ಆಕೆಯ ಜತೆಗೆ ಇದ್ದಾಗ ನೀವು ಹೀಗೆ ವರ್ತಿಸಿದರೆ, ಬೇರೆ ಸಮಯದಲ್ಲಿ ಹೇಗಿರಬಹುದು ಎಂದು ಭಾವಿಸುವಳು. ಬೇರೆಯವರನ್ನು ಹೀಯಾಳಿಸಿ ತಮಾಷೆ ಮಾಡುವುದು ಮಹಿಳೆಯರಿಗೆ ಇಷ್ಟವಾಗದು. ಭವಿಷ್ಯದಲ್ಲಿ ಆಕೆಯೊಂದಿಗೆ ನೀವು ಹೇಗೆ ವರ್ತಿಸಬಹುದು ಎನ್ನುವ ಆಲೋಚನೆಯು ಆಕೆಯ ಮನಸ್ಸಿನಲ್ಲಿ ಮೂಡುತ್ತದೆ.

ಹಾಗೆ ಸುಮ್ಮನಿರಬೇಡಿ:
ಏನೂ ಮಾಡದೇ ಸುಮ್ಮನೆ ಇರ್ರುವುದನ್ನು ಹುಡುಗಿ ಇಷ್ಟ ಪಡುವುದಿಲ್ಲ. ಕಾರಿನ ಬಾಗಿಲು ತೆಗೆಯುವುದು ಇತ್ಯಾದಿ ಮಾಡುತ್ತಲಿದ್ದರೆ ಆಗ ನಿಮ್ಮತ್ತ ಹುಡುಗಿಯು ಆಕರ್ಷಿತಳಾಗುವಳು. ಆದರೆ ಡೇಟಿಂಗ್ ಸಮಯದಲ್ಲಿ ಕಾರನ್ನು ಆಕೆ ಚಲಾಯಿಸಿಕೊಂಡು ಹೋಗಿ, ಹೋಟೆಲ್ ಬಿಲ್ ಕೂಡ ಪಾವತಿಸಿದರೆ ಖಂಡಿತವಾಗಿಯೂ ಅದು ನಿಮ್ಮ ಕೊನೆಯ ಡೇಟಿಂಗ್. ಯಾಕೆಂದರೆ ನೀವು ಇಂತಹ ಸಮಯದಲ್ಲಿ ತೋರುವ ವರ್ತನೆ ಆಕೆಗೆ ಸರಿಯೆನಿಸದು. ಅದಕ್ಕಾಗಿ ನಿಮಗೆ ಸಾದ್ಯವಾದಷ್ಟು ಎಲ್ಲ ವಿಚಾರದಲ್ಲೂ ಹಂಚಿಕೊಂಡು ಕೆಲಸ ಮಾಡಿ. ಆಗ ಇಬ್ಬರೂ ಖುಷಿಯಾಗಿರುವಿರಿ.

ಕುಂದಾಪ್ರ ಡಾಟ್ ಕಾಂ ಲೇಖನ

Exit mobile version