Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕಿನ ವಿವಿಧೆಡೆ ಸಾಮೂಹಿಕ ಕನ್ನಡ ಗೀತ ಗಾಯನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮ ಕುಂದಾಪುರದ ವಿವಿಧೆಡೆ ನಡೆಯಿತು.

ಕುಂದಾಪುರದ ಮಿನಿವಿಧಾನಸೌಧ, ತಾಲೂಕು ಪಂಚಾಯತ್ ಕಛೇರಿ, ಕೋಡಿ ಸೀವಾಕ್, ಕುಂದಾಪುರ ಬೋರ್ಡ್ ಹೈಸ್ಕೂಲ್, ಪದವಿ ಪೂರ್ವ ಕಾಲೇಜು, ಗಾಂಧಿ ಪಾರ್ಕ್‌ ವಿವಿಧೆಡೆಯಲ್ಲಿ ನಡೆದ ಗೀತ ಗಾಯನದಲ್ಲಿ ಅಧಿಕಾರಿಗಳು, ವಿದಾರ್ಥಿಗಳು ಹಾಗೂ ಸಾರ್ವಜನಿಕರು ಕನ್ನಡ ಗೀತ ಗಾಯನದಲ್ಲಿ ಪಾಲ್ಗೊಂಡರು. ಆರಂಭದಲ್ಲಿ ನಾಡಗೀತ ಬಳಿಕ ನಿಗದಿಪಡಿಸಿದ ಮೂರು ಕನ್ನಡಗೀತೆ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು.

ಕುಂದಾಪುರ ಮಿನಿ ವಿಧಾನಸೌಧದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಾಜು ಕೆ. ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಗಾಯಕ ಗಣೇಶ್ ಗಂಗೊಳ್ಳಿ ಮೊದಲಾದವರು ಗೀತ ಗಾಯನದಲ್ಲಿ ಭಾಗವಹಿಸಿದರು.

ಇದನ್ನೂ ಓದಿ:
► ಬೈಂದೂರು ತಾಲೂಕಿನಲ್ಲಿ ಸಾಮೂಹಿಕ ಕನ್ನಡ ಗೀತ ಗಾಯನ – https://kundapraa.com/?p=54101 .

Exit mobile version