Kundapra.com ಕುಂದಾಪ್ರ ಡಾಟ್ ಕಾಂ

ದೇವಳದ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮದನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ನ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಯ 30 ಅಧಿಸೂಚಿತ ಸಂಸ್ಥೆಗಳಿಗೆ ಮರು ಪ್ರಕಟಣೆ ಹಾಗೂ ಹೊಸದಾಗಿ ಬಿ ಪ್ರವರ್ಗ 1 ಮತ್ತು ಸಿ ಪ್ರವರ್ಗದ 21 ಅಧಿಸೂಚಿತ ಸಂಸ್ಥೆಗಳು/ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಭಕ್ತಾಧಿಗಳು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕನಿಷ್ಟ 25 ವರ್ಷ ವಯಸ್ಸಿನ ಆಸಕ್ತ ಭಕ್ತಾದಿಗಳು ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ / ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ನವೆಂಬರ್ 29 ರ ಒಳಗೆ , ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಬಿ ಪ್ರವರ್ಗದ ದೇವಸ್ಥಾನಗಳು: ಉಡುಪಿ ತಾಲೂಕಿನ ಪಂದುಬೆಟ್ಟು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಹೆರ್ಗದ ಶ್ರೀ ಫರೀಕ ಮಹಾಲಿಂಗೇಶ್ವರ ದೇವಸ್ಥಾನ, ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ಗ್ರಾಮದ ಶ್ರೀ ಸರಸ್ವತಿ ನಾರಾಯಣ ದೇವಸ್ಥಾನ, ಹೊಸಾಳ ಬಪ್ಪಲಾಪುರ ಶ್ರೀ ವಿನಾಯಕ ದೇವಸ್ಥಾನ, ಚಾಂತಾರುವಿನ ಶ್ರೀ ಗಂಗಾಧರ ದೇವಸ್ಥಾನ, ಹೊಸಾಳ ಗ್ರಾಮದ ಮಾಣಿಗರ ಕೇರಿಯ ಸೋಮನಾಥೇಶ್ವರ ದೇವಸ್ಥಾನ, ಗುಂಡ್ಮಿಯ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನ, ಕಚ್ಚೂರಿನ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನ, ವಾರಂಬಳ್ಳಿ ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಹಾಗೂ ಕೂರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪೆಜಮಂಗೂರುವಿನ ಶ್ರೀ ವೀರಭದ್ರ ದೇವಸ್ಥಾನ, ಚೇರ್ಕಾಡಿನ ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಕುಂದಾಪುರ ತಾಲೂಕಿನ ಮೊಳ್ಳಹಳ್ಳಿಯ ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಪ್ಪಿನಕುದ್ರುವಿನ ಶ್ರೀ ವಿನಾಯಕ ದೇವಸ್ಥಾನ, ಸೇನಾಪುರದ ಬೆಳವಿನಮಕ್ಕಿಯ ಶ್ರೀ ಮಹಾಗಣಪತಿ ದೇವಸ್ಥಾನ, ಶಂಕರನಾರಾಯಣದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕೂಡಿಗೆ ಚಿತ್ತಾರಿ ಬ್ರಹ್ಮಲಿಂಗ ದೇವಸ್ಥಾನ, ಮಚ್ಚಟ್ಟುವಿನ ಶ್ರೀ ವಿನಾಯಕ ದೇವಸ್ಥಾನ ಹಾಗೂ ಕಂದಾವರದ ಶ್ರೀರಾಮಾನುಜ ಹನುಮಂತ ದೇವಸ್ಥಾನ, ಕೋಟೇಶ್ವರದ ಶ್ರೀಮಹಾದೇವಿ ಮಾರಿಯಮ್ಮ ದೇವಸ್ಥಾನ

ಬೈಂದೂರು ತಾಲೂಕಿನ ನಾವುಂದದ ಅರೆಹೊಳೆ ಶ್ರೀ ವಿನಾಯಕ ದೇವಸ್ಥಾನ, ಹೆರಂಜಾಲುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಾಡದ ಶ್ರೀ ಚಿತ್ತಾರಿ ಬ್ರಹ್ಮಲಿಂಗ ದೇವಸ್ಥಾನ, ಬೈಂದೂರಿನ ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ, ಅರೆಕಲ್ಲುವಿನ ಬಿಜೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.

ಕಾರ್ಕಳ ತಾಲೂಕಿನ ಬೆಳಂಜೆಯ ಶ್ರೀ ಮಹಿಷಮರ್ಧಿನಿ ದೇವಸ್ಥಾನ, ಬೋಳದ ಶ್ರೀ ಮೃತ್ಯುಂಜಯ ರುದ್ರ ಸೋಮನಾಥ ದೇವಸ್ಥಾನ.

ಹೆಬ್ರಿ ತಾಲೂಕಿನ ಕೆರೆಬೆಟ್ಟುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶಿವಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,

ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ

ಸಿ ಪ್ರವರ್ಗದ ದೇವಸ್ಥಾನಗಳು: ಉಡುಪಿ ತಾಲೂಕಿನ ಶಿರೂರು ವಿಷ್ಣುಮೂರ್ತಿ ದೇವ ವೆಂಕಟರಮಣ ಶ್ರೀ ಅಬ್ಬಗ-ದಾರಗ ಭೂತ ದೇವಸ್ಥಾನ, ಪುತ್ತೂರು ಶ್ರೀ ಸದಾಶಿವ ದೇವಸ್ಥಾನ ಮತ್ತು ನಿಟ್ಟೂರಿನ ವಿಷ್ಣುಮೂರ್ತಿ ದೇವಸ್ಥಾನ, ಶಿವಳ್ಳಿಯ ಬುಡ್ನಾರು ವಿಷ್ಣುಮೂರ್ತಿ ದೇವಸ್ಥಾನ, ತೋನ್ಸೆಯ ಹೂಡೆ ಶ್ರೀಹನುಮಂತ ದೇವಸ್ಥಾನ ಮತ್ತು ಶ್ರೀ ಖಂಡಿಗೆ ವಿನಾಯಕ ದೇವಸ್ಥಾನ ಕೊಡವೂರಿನ ಕಂಬ್ಲಕಟ್ಟೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ

ಬ್ರಹ್ಮಾವರ ತಾಲೂಕಿನ ಚೆರ್ಕಾಡಿ ಸೂರ್ಯಬೆಟ್ಟುವಿನ ಶ್ರೀ ವಿನಾಯಕ ದೇವಸ್ಥಾನ, ಕಚ್ಚೂರುರಿನ ಶ್ರೀ ಬಾರುಕೂರು ಅರಮನೆ ಹನುಮಂತ ದೇವಸ್ಥಾನ ಮತ್ತು ಹನೆಗಳ್ಳಿ ಹರಪ್ಪಳ್ಳಿ ಶ್ರೀ ವಿನಾಯಕ ದೇವಸ್ಥಾನ, ಕಾವಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಾಂಡೇಶ್ವರ ಶ್ರೀ ಶಂಕರನಾರಾಯಣ ದೇವಸ್ಥಾನ.

ಕಾಪು ತಾಲೂಕಿನ ಏಣಗುಡ್ಡೆ ಶ್ರೀ ಚಂಡಿಕಾದುರ್ಗಾಪರಮೇಶ್ವರಿ ದೇವಸ್ಥಾನ, ತೆಂಕ ಶ್ರೀವೀರಭದ್ರದೇವಸ್ಥಾನ.

ಕುಂದಾಪುರ ತಾಲೂಕಿನ ಹಾಲಡಿ, ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ, ಹರ್ಡಳ್ಳಿ, ಮಂಡಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಉಪ್ಪನಕುದ್ರುವಿನ ಶ್ರೀವಾಸುದೇವ ದೇವಸ್ಥಾನ.

ಬೈಂದೂರು ತಾಲೂಕಿನ ನಾವುಂದ ಗ್ರಾಮದ ಮಸ್ಕಿ ಗೋಪಾಲ ಕೃಷ್ಣ ಮತ್ತು ವಿನಾಯಕ ದೇವಸ್ಥಾನ, ಕಂಬದಕೋಣೆ ಶ್ರೀ ಕೊಕ್ಕೇಶ್ವರ ದೇವಸ್ಥಾನ.

ಕಾರ್ಕಳ ತಾಲೂಕಿನಲ್ಲಿ ಕಾಂತಾವರ ಕೆಪ್ಲಾಜೆ ಮಹಾಮ್ಮಾಯಿದೇವಿಗುಡಿ, ಈದು ಗ್ರಾಮದ ಶ್ರೀಮುಜಿಲ್ಲಾಯ ದೈವಸ್ಥಾನ.

Exit mobile version