ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ರಿ. ಮಂಗಳೂರು ಆಯೋಜಿಸಿದ ಎರಡನೇ ಅಂತರ್ ಜಿಲ್ಲಾ ಮುಕ್ತ ರ‍್ಯಾಪಿಡ್ ಚೆಸ್ ಪಂದ್ಯಾಟ ನಡೆಯಿತು.
ಇಲ್ಲಿನ ಕಶ್ವಿ ಚೆಸ್ ಸ್ಕೂಲ್ ವಿದ್ಯಾರ್ಥಿಗಳಾದ 15ರ ವಯೋಮಾನದ ಬಾಲಕರ ವಿಭಾಗದಲ್ಲಿ ಹಂಗಳೂರಿನ ನಿಶಾಂತ್ ಡಿಸೋಜ್ ಪ್ರಥಮ ಸ್ಥಾನ, 13ರ ವಯೋಮಾನದ ಬಾಲಕರ ವಿಭಾಗದಲ್ಲಿ ತೀರ್ಥಹಳ್ಳಿಯ ತೇಜಸ್ ಎಂ. ಶೆಣೈ ದ್ವಿತೀಯ ಸ್ಥಾನ, 11ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಳ್ವಾಡಿಯ ಆರಾಧ್ಯ ಎಸ್. ಶೆಟ್ಟಿ ದ್ವಿತೀಯ ಸ್ಥಾನ, 9ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೋಟೇಶ್ವರದ ಸನಾ ಶೆಟ್ಟಿ ಪ್ರಥಮ ಸ್ಥಾನ, ಮತ್ತು 7ರ ವಯೋಮಾನದ ಬಾಲಕರ ವಿಭಾಗದಲ್ಲಿ ಕುಂದಾಪುರದ ಸಿದ್ಧಾಂತ ವಿ. ಪುಜಾರಿ ಪ್ರಥಮ ಸ್ಥಾನ ಹಾಗೂ ಉಪ್ಪುಂದದ ತೇಜಸ್ ದ್ವೀತಿಯ ಸ್ಥಾನ ಪಡೆದರು.