ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದ ಕ – ಉಡುಪಿ ಜಿಲ್ಲೆ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ರಿ . ಕುಂದಾಪುರ – ಬೈಂದೂರು ವಲಯ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಹಿತಿಗಳಾದ ಜನಾರ್ದನ ಅಡಿಗ ಮೊಗೇರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ -ಬೈಂದೂರ ವಲಯದ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಸ್, ಉಪಾಧ್ಯಕ್ಷರುಗಳಾದ ಚಂದ್ರಕಾಂತ್, ರಾಘವೇಂದ್ರ ಭಟ್ ವಂಡ್ಸೆ, ಶ್ರೀನಿವಾಸ್ ದೇವಾಡಿಗ, ಕೋಶಾಧಿಕಾರಿ ವಿಠಲ್ ನಾಗೂರ್, ಸಲಹಾ ಸಮಿತಿ ಸದಸ್ಯರು, ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಎಲ್ಲ ಛಾಯಾಗ್ರಾಹಕ ಸದಸ್ಯರು ಉಪಸ್ಥಿತರಿದ್ದರು.