Kundapra.com ಕುಂದಾಪ್ರ ಡಾಟ್ ಕಾಂ

ನೀಟ್ ಪರೀಕ್ಷೆ: ಕುಂದಾಪುರ ವೆಂಕಟರಮಣ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
2020-21ನೇ ಸಾಲಿನ‌ಲ್ಲಿ ನಡೆದ ವೈದ್ಯಕೀಯ ವಿಭಾಗದ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ(ನೀಟ್) ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ಗೌರವ್ 604 (98.9 ಪರ್ಸಂಟೈಲ್) ಪಡೆಯುದರ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಉಳಿದಂತೆ ಸಿಂಚನಾ ಎಸ್. 497(94.32 ಪರ್ಸಂಟೈಲ್), ಅವನಿ ಆಚಾರ್ಯ 469 (92.6 ಪರ್ಸಂಟೈಲ್ ), ಅಫ್ರಿಧಿ ಎಸ್.440 (90.6 ಪರ್ಸಂಟೈಲ್), ಸಾತ್ವಿಕ್ ಶೆಟ್ಟಿ 417 (88.88 ಪರ್ಸಂಟೈಲ್) ಫಲಿತಾಂಶವನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವ್ರಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version