Site icon Kundapra.com ಕುಂದಾಪ್ರ ಡಾಟ್ ಕಾಂ

ಸಿದ್ದಾಪುರದ ಪುರುಷೋತ್ತಮ ಭಟ್, ಅನಸೂಯ ಭಟ್ ಜೇಸಿ ಆದರ್ಶ ದಂಪತಿಗಳು

ಕುಂದಾಪುರ:  ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಜೇಸಿ ಸಪ್ತಾಹದ ಅಂಗವಾಗಿ ನಡೆದ ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಪಾಲ್ಗೊಂಡ 7 ದಂಪತಿಗಳಲ್ಲಿ ಸಿದ್ದಾಪುರದ ಪುರುಷೋತ್ತಮ ಭಟ್ ಹಾಗೂ ಶ್ರೀಮತಿ ಅನಸೂಯ ಪಿ. ಭಟ್ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡರು.

ನಾಗೇಶ್ ಕೋಟ ಹಾಗೂ ಶ್ರೀಮತಿ ಭವ್ಯ ನಾಗೇಶ್ ಅವರು ದ್ವಿತೀಯ ಸ್ಥಾನ ಮತ್ತು ಕೋಡಿಯ ಅಶೋಕ ಪೂಜಾರಿ ಮತ್ತು ಶ್ರೀಮತಿ ತೃತೀಯ ಸ್ಥಾನ ಪಡೆದುಕೊಂಡರು.

ತೀರ್ಪುಗಾರರಾಗಿ ಉದ್ಯಮಿ ಸದಾನಂದ ನಾವಡ, ಉಪನ್ಯಾಸಕ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ, ಶ್ರುತಿ ಶಶಾಂಕ್ ಪಟೇಲ್ ಸಹಕರಿಸಿದರು. ಜೇಸಿ ವಲಯ ೧೫ರ ವಲಯಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್., ಉದ್ಯಮಿ ಸಂತೋಷ ಪ್ರಭು ಕೋಟ, ಉದ್ಯಮಿ ದಿನೇಶ್ ಗೋಡೆ, ಮೊಬೈಲ್ ಎಕ್ಸ್‌ನ ಮುಸ್ತಾಫ, ಹರೀಶ್ ಪೂಜಾರಿ ಅಂಕದಕಟ್ಟೆ, ವಲಯ ಉಪಾಧ್ಯಕ್ಷ ನಾಗೇಂದ್ರ ಪೈ, ಜೇಸಿಐ ಕುಂದಾಪುರ ಸಿಟಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ, ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವಾಧ್ಯಕ್ಷ ನಿತಿನ್ ಅವಭೃತ, ಕಾರ್ಯದರ್ಶಿ ನಾಗೇಶ್ ನಾವಡ, ಸಪ್ತಾಹ ಸಭಾಪತಿ ವಿಜಯ ಭಂಡಾರಿ, ಸಪ್ತಾಹ ಕಾರ್ಯದರ್ಶಿ ವೆಂಕಟೇಶ ಪ್ರಭು, ಖಜಾಂಚಿ ಯು. ರಾಘವೇಂದ್ರ ಭಟ್, ಜ್ಯೂನಿಯರ್ ಜೇಸಿ ಅಧ್ಯಕ್ಷ ಸನತ್ ಶೇಟ್, ಜೇಸಿರೆಟ್ ಅಧ್ಯಕ್ಷೆ ಸುನೀತಾ ಶ್ರೀಧರ್, ಸಪ್ತಾಹ ಸಂಚಾಲಕ ರಾಘವೇಂದ್ರ ಕೆ.ಸಿ, ಯೋಜನಾಧಿಕಾರಿ ಮಿಥುನ್ ಸುವರ್ಣ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ರಾಘವೇಂದ್ರಚರಣ ನಾವಡ ಆದರ್ಶ ದಂಪತಿಗಳು ಸ್ಪರ್ಧೆ ಕಾರ್ಯಕ್ರಮ ನಿರ್ವಹಿಸಿದರು.

Exit mobile version