Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ಟ್ರಸ್ಟ್‌ನ ಬೆಳ್ಳಿಹಬ್ಬ ಸಂಭ್ರಮ, ಹಳ್ಳಿಯೆಡೆಗೆ ಗೊಂಬೆ ನಡಿಗೆ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ, ಜಗತ್ತಿನ ವಿವಿಧೆಡೆ ಪ್ರದರ್ಶನಗೊಂಡ ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ನ. 5ರಿಂದ ‘ಹಳ್ಳಿಯೆಡೆಗೆ ಗೊಂಬೆ ನಡಿಗೆ’ ಆಯೋಜಿಸಿದೆ. ಜಿಲ್ಲೆಯ 25 ಹಳ್ಳಿಗಳಲ್ಲಿ ಗೊಂಬೆಯಾಟ ಪ್ರದರ್ಶನ ನೀಡಲಿದೆ ಎಂದು ಮಂಡಳಿಯ ಆರನೆ ತಲೆಮಾರಿನ ಪ್ರವರ್ತಕ ಭಾಸ್ಕರ ಕೊಗ್ಗ ಕಾಮತ್ ತಿಳಿಸಿದ್ದಾರೆ.

350 ವರ್ಷಗಳ ಪರಂಪರೆಯ ಗೊಂಬೆಯಾಟವನ್ನು ಈಗ ಮುನ್ನಡೆಸುತ್ತಿರುವ ಅವರು ಗೊಂಬೆಯಾಟ ಉಳಿವಿಗಾಗಿ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಈ ವರ್ಷ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಅವರ ಜನ್ಮ ಶತಮಾನೋತ್ಸವ ಮತ್ತು ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಅಭಿಯಾನ ನಡೆಸಲಾಗುತ್ತಿದೆ ಎಂದಿದ್ದಾರೆ.

ನ.5ರ ಸಂಜೆ 6ಗಂಟೆಗೆ ಬೈಂದೂರು ತಾಲ್ಲೂಕಿನ ಬಡಾಕೆರೆ ಲಕ್ಷ್ಮೀಜನಾರ್ದನ ಸಭಾಭವನದಲ್ಲಿ ಅಭಿಯಾನ ಉದ್ಘಾಟನೆಗೊಳ್ಳುವುದು. ಆ ಬಳಿಕ ಮುಂದಿನ ಸ್ಥಳಗಳಲ್ಲಿ ಇದೇ ಸಮಯಕ್ಕೆ ಪ್ರದರ್ಶನಗಳು ನಡೆಯಲಿವೆ. ನ.6ರಂದು ರಂಗನಾಥ ಸಭಾಭವನ, ಸಿದ್ಧಾಪುರ, ನ.7ರಂದು ಮಹಾಲಿಂಗೇಶ್ವರ ಸಭಾಭವನ, ಹಾರಾಡಿ, ನ.9ರಂದು ನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ, ಮಟ್ಪಾಡಿ, ನ.11ರಂದು ಪೇಟೆ ವೆಂಕಟರಮಣ ಸಭಾಭವನ, ಶಿರೂರು, ನ.13ರಂದು ಜನಸೇವಾ ಟ್ರಸ್ಟ್ ಮೂಡು ಗಿಳಿಯಾರು, ನ.14ರಂದು. ಲಕ್ಷ್ಮೀವೆಂಕಟರಮಣ ದೇವಸ್ಥಾನ ಹರಿಖಂಡಿಗೆ, ನ.17ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಹೊಳೆ, ನ.18ರಂದು ಶಾರದಾ ಸಭಾಭವನ ನೀಲಾವರ, ನ.20ರಂದು ನಂದಿಕೇಶ್ವರ ದೇವಸ್ಥಾನ ಹೆಗ್ಡೆಕೆರೆ ಹಳ್ಳಾಡಿ, ನ.21ರಂದು ಮಹಾಗಣಪತಿ ಸೆಲೆಕ್ಟ್ ತಂಡ ಮಟ್ನಕಟ್ಟೆ ಕೆರ್ಗಾಲು, ನ.23ರಂದು ಬಟ್ಟೆ ವಿನಾಯಕ ದೇವಸ್ಥಾನ ದೇವಲ್ಕುಂದ, ನ.25ರಂದು ನಾರಾಯಣಗುರು ಸಭಾಭವನ ಕೊಕ್ಕರ್ಣೆ, ನ.26ರಂದು ರಾಮಮಂದಿರ ಆಲೂರು, ನ.30ರಂದು ಮಹಾಗಣಪತಿ ದೇವಸ್ಥಾನ ಹಟ್ಟಿಕುದ್ರು.

ಡಿ.2ರಂದು ಕುಂದ ಅಧ್ಯಯನ ಕೇಂದ್ರ ಉಪ್ಪುಂದ, ಡಿ.4ರಂದು ಮಹಿಷ ಮರ್ದಿನಿ ಗದ್ದುಗೆ ಅಮ್ಮನವರ ದೇವಸ್ಥಾನ ಚಾಂತಾರು, ಡಿ.5ರಂದು ಲಯನ್ಸ್ ಕ್ಲಬ್ ಹಕ್ಲಾಡಿ, ಡಿ.7ರಂದು ಕಾಡಿಕಾಂಬಾ ದೇವಸ್ಥಾನ ದೊಂಬೆ ಪಡುವರಿ, ಡಿ.9ರಂದು ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ ಮೊವಾಡಿ ಡಿ.11ರಂದು ದೀಟಿ ಮಹಾಲಿಂಗೇಶ್ವರ ದೇವಸ್ಥಾನ ಬಿಜೂರು, ಡಿ.12ರಂದು ಶಾರದಾ ಸ್ಪೋರ್ಟ್ಸ್ ಕ್ಲಬ್ ಮುಂಡ್ಕಿನಜಡ್ಡು ಚೇರ್ಕಾಡಿ, ಡಿ.14ರಂದು ಮಹಿಷಮರ್ದಿನಿ ದೇವಸ್ಥಾನ ಸಭಾಭವನ ಕಾನ್ಬೇರು ಹೊಸೂರು, ಡಿ.16ರಂದು ಹೊಂಗಿರಣ ಶಾಲಾ ವೇದಿಕೆ ಹೊಸೂರು ಶಿರೂರು, ಡಿ.19ರಂದು ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕುದ್ಕುಂಜೆಯಲ್ಲಿ ಗೊಂಬೆಯಾಟ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.

Exit mobile version