Site icon Kundapra.com ಕುಂದಾಪ್ರ ಡಾಟ್ ಕಾಂ

ತೆಂಕನಿಡಿಯೂರು ಕಾಲೇಜಿನಲ್ಲಿ ಕ್ಯಾಂಪಸ್ ಆಯ್ಕೆ, ವಿದ್ಯಾರ್ಥಿಗಳಿಂದ ನೋಂದಣಿಗೆ ಅಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ, ದಿಯಾ ಸಿಸ್ಟಮ್ ಕಂಪೆನಿಯ ವತಿಯಿಂದ ಕ್ಯಾಂಪಸ್ ಆಯ್ಕೆ ನಡೆಯಲಿದೆ. ನವೆಂಬರ್ 9ರಂದು ಬೆಳಿಗ್ಗೆ 10 ಗಂಟೆಯಿಂದ ಆಯ್ಕೆಯು ಆರಂಭಗೊಳ್ಳಲಿದೆ.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಂಪೆನಿಗೆ ಆಯ್ಕೆ ಮಾಡಲಿದ್ದು, ಯಾವುದೇ ಕಾಲೇಜಿನ ಬಿ.ಎಸ್ಸಿ., ಬಿ.ಸಿ.ಎ., ಬಿ.ಟೆಕ್, ಎಂ.ಸಿ.ಎ., ಎಂ.ಎಸ್ಸಿ. ಪೂರೈಸಿದ ವಿದ್ಯಾರ್ಥಿಗಳು ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಅಷ್ಟಿಟ್ಯೂಡ್ ಪರೀಕ್ಷೆ, ಪ್ರಬಂಧ ರಚನೆ, ಟೈಪಿಂಗ್ ಪರೀಕ್ಷೆ ಹಾಗೂ ಸಂದರ್ಶನವನ್ನು ನಡೆಸಲಾಗುವುದು.

ಆಸಕ್ತರು https://docs.google.com/forms ನಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 9480265511 ನ್ನು ಸಂಪರ್ಕಿಸಬುಹುದಾಗಿದೆಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.

Exit mobile version