Kundapra.com ಕುಂದಾಪ್ರ ಡಾಟ್ ಕಾಂ

ಅಂಗನವಾಡಿ ಮಕ್ಕಳನ್ನು ವಾದ್ಯಗೋಷ್ಠಿ ಮೂಲಕ ಬರಮಾಡಿಕೊಂಡ ಶಿಕ್ಷಕರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ರಥಬೀದಿ ವಾರ್ಡ್‌ನ ಅಂಗನವಾಡಿ ಕೇಂದ್ರದಲ್ಲಿ ಸರ್ಕಾರದ ಆದೇಶದಂತೆ ವಿಶೇಷವಾಗಿ ವಾದ್ಯಗೋಷ್ಠಿಯ ಮೂಲಕ ಮಕ್ಕಳನ್ನು ಬರಮಾಡಿಕ್ಕೊಳ್ಳಲಾಯಿತು.

ಈ ಸಂದರ್ಭದ ಪಂಚಾಯತ್ ಸದಸ್ಯರಾದ ಮಂಜುನಾಥ ದೇವಾಡಿಗ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಅಂಗನವಾಡಿ ಶಿಕ್ಷಕಿ, ಸಹಾಯಕರು, ಬಾಲವಿಕಾಸ ಸಮಿತಿ ಅಧ್ಯಕ್ಷರು, ಸದಸ್ಯರು, ವಾದ್ಯವೃಂದದವರು ಪೋಷಕರು, ದಾದಿಯರು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು.

ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲಿಮಕ್ಕಿ ಅಂಗನವಾಡಿ ಕೇಂದ್ರದಲ್ಲಿ ಸರ್ಕಾರದ ಆದೇಶದಂತೆ ದೀಪ ಬೆಳಗಿಸಿ ಪ್ರಾರ್ಥನೆಯೊಂದಿಗೆ ಮಕ್ಕಳನ್ನು ಸ್ವಾಗತಿಸಲಾಯಿತು.

ಈ ಸಂದರ್ಭ ಸಮಿತಿ ಅಧ್ಯಕ್ಷ ರು, ಗ್ರಾಮ ಪಂಚಾಯತ್ ಸದಸ್ಯ ರು, ಶಾಲಾ ಮೂಖ್ಯೇಪಧ್ಯಾರು, ಸ್ತೀ ಶಕ್ತಿ ಸದಸ್ಯರು, ಕಿರಿಯ ಆರೋಗ್ಯ ಕಾರ್ಯ ಕರ್ತೆ, ಆಶಾ ಕಾರ್ಯಕರ್ತೆ, ಮಕ್ಕಳ ಫೋಷಕರು ಉಪಸ್ಥಿತರಿದ್ದರು.

Exit mobile version