Site icon Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ: ಸವಿನಯ ಸ್ವಸಹಾಯ ಸಂಘದ 16ನೇ ವರ್ಷದ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಂಡ್ಸೆ ಒಕ್ಕೂಟ ವ್ಯಾಪ್ತಿಯ ಸವಿನಯ ಸ್ವಸಹಾಯ ಸಂಘದ 16ನೇ ವರ್ಷದ ವಾರ್ಷಿಕೋತ್ಸವ ವಂಡ್ಸೆ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು.

ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಿ.ಶ್ರೀಧರ್ ಶೆಟ್ಟಿ, ಅರ್ಚಕರಾದ ಗೋಪಾಲಕೃಷ್ಣ ಉಪಾಧ್ಯಾ, ರಾಜಶೇಖರ ಉಪಾಧ್ಯಾ, ಹಕ್ಲಾಡಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಚಂದ್ರ ಬಿಲ್ಲವ ಹಟ್ಟಿಮನೆ, ಶ್ರೀ ಕ್ಷೇ.ಧ.ಗ್ರಾ ಯೋಜನೆಯ ವಂಡ್ಸೆ ವಲಯ ಮೇಲ್ವಿಚಾರಕಿ ಪಾರ್ವತಿ, ಸೇವಾ ಪ್ರತಿನಿಧಿ ಶರ್ಮಿಳಾ, ಒಕ್ಕೂಟದ ಅಧ್ಯಕ್ಷ ಗಿರೀಶ್ ಎನ್.ನಾಯ್ಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಂಡ್ಸೆ ಒಕ್ಕೂಟದ ಹಾಲಿ, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಯವರನ್ನು ಗೌರವಿಸಲಾಯಿತು. ಸಂಘದ ಸದಸ್ಯರಾದ ಗುರುರಾಜ ಗಾಣಿಗ, ರಾಘವೇಂದ್ರ, ಸುಧಾಕರ, ಹರೀಶ ನಾಯ್ಕ್, ದಯಾನಂದ, ಕೃಷ್ಣ ಉಪಸ್ಥಿತರಿದ್ದರು.

ಸಂಘದ ಸದಸ್ಯರಾದ ದಿವಾಕರ ಸುಜಿ ಸ್ವಾಗತಿಸಿದರು. ಅನಂದ ನಾಯ್ಕ್ ವರದಿ ವಾಚಿಸಿದರು. ಶಂಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Exit mobile version