Kundapra.com ಕುಂದಾಪ್ರ ಡಾಟ್ ಕಾಂ

‘ಜ್ಞಾನದೀಪ’ ಕಾರ್ಯಕ್ರಮದಡಿ ಶಿಕ್ಷಕರ ಸಂದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲ್ಲೂಕು ಇದರ ವತಿಯಿಂದ ಜ್ಞಾನದೀಪ ಶಿಕ್ಷಕರ ಸಂದರ್ಶನ ಕಾರ್ಯಕ್ರಮ ತ್ರಾಸಿ ಯೋಜನಾ ಕಚೇರಿಯಲ್ಲಿ ಶುಕ್ರವಾರ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯೋಜನೆಯ ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಗಣೇಶ್ ಬಿ., ಉಡುಪಿ ಜಿಲ್ಲೆಯಲ್ಲಿ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕ ಕೊರತೆ ಇರುವ 40 ಆಯ್ದ ಶಾಲೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ಜ್ಞಾನದೀಪ” ಕಾರ್ಯಕ್ರಮದಡಿಯಲ್ಲಿ ಶಿಕ್ಷಕರನ್ನು ಒದಗಿಸಲಾಗುತ್ತಿದೆ. ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನಲ್ಲಿ ಸಂದರ್ಶನಕ್ಕೆ ಹಾಜರದವರಲ್ಲಿ 14 ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಶ್ರೀ ಕ್ಷೇತ್ರದಿಂದಲೇ ಪ್ರತಿ ತಿಂಗಳು ಗೌರವಧನ ಪಾವತಿಸಲಾಗುತ್ತದೆ. ಆಯ್ಕೆಯಾದ ಶಿಕ್ಷಕರು ನಿರ್ದಿಷ್ಟ ಪೂರ್ವ ತಯಾರಿಯೊಂದಿಗೆ ಸರ್ಕಾರದ ಶಿಕ್ಷಣ ನೀತಿ, ನಿಯಮ ಪಾಲನೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡುವಂತೆ ಹಾಗೂ ಪ್ರತಿ ತಿಂಗಳು ಕಚೇರಿಗೆ ಬಂದು ವರದಿ ಮಾಡಿಕೊಳ್ಳುವಂತೆ ಮಾಹಿತಿ ನೀಡಿದರು.

ಕಚೇರಿ ಪ್ರಬಂಧಕ ಸತೀಶ್ ಸಹಾಯಕ ಆಡಳಿತ ಪ್ರಬಂಧಕಿ ಶೈಲಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ ಉಪಸ್ಥಿತರಿದ್ದರು. ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಪ್ರಾಸ್ತಾವಿಕ ಮಾತನಾಡಿದರು.

Exit mobile version