Kundapra.com ಕುಂದಾಪ್ರ ಡಾಟ್ ಕಾಂ

ನಾಗೂರಿನಲ್ಲಿ ಮೈನಾರಿಟಿ ಎನ್.ಎಸ್.ಪಿ ಹಾಗೂ ವಿದ್ಯಾಸಿರಿ ವಿದ್ಯಾರ್ಥಿ ವೇತನ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಹಾಗೂ ಪ್ರೇರಣೆ ನೀಡುವ ಉದ್ದೇಶದಿಂದ ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕ ಮತ್ತು ನಾಗೂರು ಜಾಮಿಯ ಮಸೀದಿಯ ಜಂಟಿ ಆಶ್ರಯದಲ್ಲಿ ತಾಲೂಕು ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿ ಅವರ ಅಧ್ಯಕ್ಷತೆಯಲ್ಲಿ ಮೈನಾರಿಟಿ ಎನ್.ಎಸ್.ಪಿ ಹಾಗೂ ವಿದ್ಯಾಸಿರಿ ವಿದ್ಯಾರ್ಥಿವೇತನ ಶಿಬಿರ ನಾಗೂರು ಜಾಮಿಯ ಮಸೀದಿಯ ಆವರಣದಲ್ಲಿ ನಡೆಯಿತು.

ನಾಗೂರು ಜಾಮಿಯ ಮಸೀದಿಯ ಖತೀಬರು ಮೌಲಾನ ರಿಝ್ವಾನ್ ಸಾಹೇಬ್ ಅವರ ಕಿರಾತ್ ಮೂಲಕ ಸಮಾರಂಭವನ್ನು ಪ್ರಾರಂಭಿಸಲಾಯಿತು. ಸ್ವಯಂಸೇವಕರಾಗಿ ವಿದ್ಯಾರ್ಥಿಗಳಾದ ಝೀಶಾನ್ ಹಳಗೇರಿ, ಅಲ್ಫಾಝ್ ಹಳಗೇರಿ ಸ್ಕಾಲರ್ಶಿಪ್ ಅರ್ಜಿಯನ್ನು ಸಲ್ಲಿಸಲು ಸಹಕಾರ ನೀಡಿದರು.

ಈ ಸಂದರ್ಭ ಬೈಂದೂರು ಘಟಕದ ಸಲಹೆಗಾರ ಉಸ್ಮಾನ್ ಜಾಫರ್ ಸಾಹಬ್, ಅಬ್ದುಲ್ ಮುನಾಫ್ ಸಾಹಬ್, ಸಮಾಜ ಸೇವಕ ಅಶ್ರಫ್ ನಾಗೂರು, ಅಮೀರ್ ಹುಸೈನ್ ಸಾಹಬ್, ಮಸೀದಿಯ ಮುಅಝ್ಝಿನ್ ಸಲೀಮ್ ಸಾಹಬ್, ಇರ್ಫಾನ್ ಸಾಹಬ್, ಮಸೀದಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರನ್ನು ಅಭಿನಂದಿಸಲಾಯಿತು. ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.

Exit mobile version