ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ಸಿದ್ಧಿವಿನಾಯಕ ಚೆಸ್ ಆಕಾಡೆಮಿ ಬೈಂದೂರು ಇವರ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆ ಇಲ್ಲಿನ ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ನಡೆಯಿತು.
ಬೈಂದೂರು ತಾಲೂಕಿನ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ ಸಭಾಧ್ಯಕ್ಷತೆಯನ್ನು ವಹಿಸಿ, ಚೆಸ್ ಆಟ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅತ್ಯಂತ ಸಹಕಾರಿ ಎಂದರು.
ಈ ಸಂದರ್ಭ ಶಿಕ್ಷಕರಾದ ರಾಘವೇಂದ್ರ, ದೈಹಿಕ ಶಿಕ್ಷಕರಾದ ಗುರುರಾಜ ಎಸ್, ಚಂದ್ರ ದೇವಾಡಿಗ ಉಪಸ್ಥಿತರಿದ್ದರು. ಚೆಸ್ ಆಕಾಡೆಮಿಯ ಅಧ್ಯಕ್ಷರಾದ ಬಾಬು ಜೆ. ಪೂಜಾರಿ ಕಾರ್ಯಕ್ರಮವನ್ನು ನಿರ್ವಸಿದರು.
ಚೆಸ್ ಸ್ಪರ್ಧೆಯಲ್ಲಿ ಹನ್ನೆರಡು ವರ್ಷದ ವಿಭಾಗದ ಹುಡುಗಿಯರಲ್ಲಿ ಪ್ರಥಮ, ಮಧು ಮಯೂರಿ ಗ್ರೀನ್ ವ್ಯಾಲಿ ಆಂಗ್ಲ ಶಾಲೆ, ದ್ವಿತೀಯ, ಜೈನಿಕ್ ಸೈಂಟ್ ಥೋಮಸ್ ಸ್ಕೂಲ್ ಬೈಂದೂರು, ತ್ರತಿಯ, ಸಾನಿಕ ಮಾದರಿ ಸ್ಕೂಲ್ ಬೈಂದೂರು, ಹುಡುಗರ ವಿಭಾಗದಲ್ಲಿ ಆದ್ರಿತ್. ಸಂದೀಪನ್ ಆಂಗ್ಲ ಶಾಲೆ ನಾಗೂರು, ಶ್ರೀಚರಣ್ . ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ನಾಗೂರು, ವಿಖ್ಯಾತ. ಸೈಂಟ್ ತೋಮಸ್ ಆಂಗ್ಲ ಮಾಧ್ಯಮ ಶಾಲೆ ಬೈಂದೂರು, ಆದೀಶ್. ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಬೈಂದೂರು, 15 ವರ್ಷದ ಹುಡುಗಿಯರ ವಿಭಾಗದಲ್ಲಿ ಪ್ರಥಮ ನಾಗಶ್ರೀ. ರತ್ತೂಬಾಯಿ ಜನತಾ ಹೈ ಸ್ಕೂಲ್ ಬೈಂದೂರು, ದ್ವಿತೀಯ ಶ್ರಾವ್ಯ. ರತ್ತುಬಾಯಿ ಜನತಾ ಹೈಸ್ಕೂಲ್ ಬೈಂದೂರು ಹುಡುಗರ ವಿಭಾಗದಲ್ಲಿ ಪ್ರಥಮ ಶ್ರೀನಂದ, ಸಂದೀಪ ವಿಜೇತರಾಗಿದ್ದಾರೆ.