ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ನ.15ರಿಂದ ಮೊದಲ್ಗೊಂಡು ನ.22ರ ತನಕ ಉತ್ಸವ ನಡೆಯಲಿದ್ದು, ನ.20ರಂದು ಶನಿವಾರ ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ ನಡೆಯಲಿದೆ.
ಉತ್ಸವದ ಪುರ್ವಭಾವಿಯಾಗಿ ವಾರ್ಷಿಕ ಮನ್ಮಹಾ ರಥೋತ್ಸವಕ್ಕೆ ಧ್ವಜಾರೋಹಣ, ಧಾರ್ಮಿಕ ವಿಧಿವಿಧಾನದೊಂದಿಗೆ ಚಾಲನೆ ನೀಡಲಾಯಿತು. ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಪುಣ್ಯಾಹ ನಾಂದಿ, ಧ್ವಜ ವಾಹನ ಅದಿವಾಸ, ಅಸ್ತ್ರಹೋಮದೊಂದಿಗೆ ಇತರ ಧಾರ್ಮಿಕ ವಿವಿಧಾನಗಳೊಂದಿಗೆ ಕೊಡಿ ಮರವನ್ನು ಧ್ವಜಸ್ತಂಭಕ್ಕೆ ನಿಲ್ಲಿಸಿ ಸಿಂಹದ ಫೋಟೋವನ್ನು ಏರಿಸುವುದರೊಂದಿಗೆ ಹಾಗೂ ಧ್ವಜ ಬಲಿ ಮಾಡಿ ಉತ್ಸವಕ್ಕೆ ಚಾಲನೆ ಲಾಯಿತು. ತಂತ್ರಿ ಮಂಜುನಾಥ ಅಡಿಗೆ ಮಾರ್ಗದರ್ಶನದಲ್ಲಿ ವೇದಮೂರ್ತಿ ಶ್ರೀನಿವಾಸ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು.
ನ.15ರಿಂದ ನ.19ರವರೆಗೆ ಧ್ವಜಾ ರೋಹಣೋತ್ಸವ, ಗಜಾರೋಹಣೋ ತೃವ, ಆಶ್ವಾರೋಹಣೋತ್ಸವ, ಮಯೂರ ವಾಹನೋತ್ಸವ, ಪುಷ್ಪಕ ಸಿಂಹಾರೋಹ ಹೋತ್ಸವ ಜರುಗಲಿದ್ದು, 21ರಂದು ಚೂರ್ಣೋತ್ಸವ ಹಾಗೂ 22ರಂದು ಧ್ವಜಾರೋಹಣ ನಗರೋತ್ಸವ ವೈಭವ ದಿಂದ ನಡೆಯಲಿದೆ.
ಮನ್ಮಹಾ ರಥೋತ್ಸವ ಸಂದರ್ಭ ಉಪ್ಪುಂದ ಬಿಜೂರು ಪರಿಸರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆ ಪೂಜೋತ್ಸವ ನಡೆಯುತ್ತವೆ. ಮೊದಲನೇ ದಿನ ಸಂಜೆ ಉಪ್ಪುಂದ ರಥಬೀದಿಯ ಪೂರ್ವ ಕಿ.ಪ್ರಾ. ಶಾಲೆ ಬಳಿಯ ಏರು ಕಟ್ಟೆ ಎರಡನೇ ದಿನ ಹಳಗದ ಹಿತ್ತು ಕಟ್ಟೆ ಪುರಾಣಿಕರ ಕಟ್ಟೆ, ಬಿಜೂರು ಸರಾಫರ ಕಟ್ಟೆ ಸೇರುಗಾರರ ಕಟ್ಟೆ, ಬಿಜೂರು ಮಯ್ಯರ ಕಟ್ಟೆ, ಮೂರನೇ ದಿನ ಶೆಟ್ಟರ್ ಕೇರಿ ಮಾದಯ್ಯ ಶೆಟ್ಟರ ಕಟ್ಟೆ ವೈದ್ಯರಕೇರಿ ಕಟ್ಟೆ ಮಾದಪ್ಪು ಮೈಯ್ಯರಕಟ್ಟೆ ಕರಾವಳಿ ಕಾಯಿ ಭಂಡಶಾಲೆ ಕಟ್ಟೆ ನಾಲ್ಕನೇ ದಿನ ಅಂಬಾಗಿಲು ತರ್ಕ ಶೆಟ್ಟರ ಕಟ್ಟೆ ಕಟ್ಟೆರೆ ಶೆಟ್ಟರ ಕಟ್ಟೆ ದೀಟಿ ಮಯ್ಯರ ಕಟ್ಟೆ, ಶೇಟ್ರ ಕಟ್ಟೆ ಬೊಪ್ಪೆಹಕ್ಕುಗಾಣಿಗರ ಕಟ್ಟೆ, ಐದನೇ ದಿನ ಓಲಗ ಮಂಟಪ ಕಟ್ಟೆ ತೊಪ್ಪಲು ಕಟ್ಟೆ, ಚೋಟಿ ಗೋವಿಂದರ ಕಟ್ಟೆ ಹೆಬ್ಬಾರಹಿತ್ತು ಕಾರಂತರ ಕಟ್ಟೆ ಕೆಳಾಮನೆ(ತಮ್ಮಣ್ಣ ಭಟ್ಟರ) ಕಟ್ಟೆ ಪಠೇಲರ ಕಟ್ಟೆ, ಆರನೇ ದಿನ ರಥೋತ್ಸವ ಅವರೋಹಣ, ಏಳನೇ ದಿನ ಬಿಜೂರು ಅರೆಕಲ್ಲು ಬ್ರಹ್ಮನ ಕಟ್ಟೆ ಹಾಗೂ ಹೊಳ್ಳರ ಮನೆ ಬಳಿ ಬನ್ನೂರು ಶೆಟ್ಟರ ಕಟ್ಟೆ ಬಳಿಕ ನಗರೋತ್ಸವ ನಡೆಯಲಿದೆ.