Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದಿರೆ:
ತುರ್ತು ಸಮಯದಲ್ಲಿ ಮಾತ್ರ ಇಂಗ್ಲೀಷ್ ಔಷಧಿಗೆ ಮೊರೆಹೋಗಿ ಉಳಿದ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮ ಬೀರದಿರುವ ನ್ಯಾಚುರೋಪಥಿ ವೈದ್ಯಕೀಯ ಸೇವೆ ಪಡೆಯುವುದು ಆರೋಗ್ಯಕ್ಕೆ ಉತ್ತಮವಾದದ್ದು ಎಂದು ಮಂಗಳೂರಿನ ಬೃಂದಾವನ ನೇಚರ್ ಕ್ಯೂರ್ ಹಾಗೂ ಯೋಗ ಕ್ಲಿನಿಕ್‌ನ ಹಿರಿಯ ನ್ಯಾಚುರೋಪಥಿ ವೈದ್ಯೆ ಡಾ. ಶಾರದಾ ಬಂಗೇರ ಅವರು ಹೇಳಿದರು.

ಆಳ್ವಾಸ್ ಕಾಲೇಜಿನ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್, ಭಾರತ ಸರಕಾರದ ಆಯುಷ್ ಇಲಾಖೆ ಹಾಗೂ ಪುಣೆಯ ನ್ಯಾಶನಲ್ ಇನ್ಟಿಟ್ಯೂಟ್ ಆಫ್ ನ್ಯಾಚುರೋಪಥಿಯ ಸಂಯುಕ್ತ ಆಶ್ರಯದಲ್ಲಿ ರೋಗ ಮುಕ್ತ ಭಾರತ ಧ್ಯೇಯದೊಂದಿಗೆ ೪ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನು ಆಳ್ವಾಸ್ ಕಾಲೇಜಿನ ಮಿಜಾರ್ ಕ್ಯಾಂಪಸ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ವೈದ್ಯಕೀಯ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಂಡು ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿರುವ ಜಂಕ್ ಮಾಹಿತಿಗಳನ್ನು ಅನುಸರಿಸದೇ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಕೊಳ್ಳಬೇಕೆಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಅದೃಶ್ಯವಾಗಿರುವ ವಿಷಯಗಳ ಬಗ್ಗೆ ಚಿಂತಿಸುವ ಬದಲಿಗೆ ತಮಗೆ ಲಭ್ಯವಿರುವ ವಿಷಯಗಳ ಕುರಿತು ವಿಶೇಷ ಜ್ಞಾನ ಗಳಿಸಿದಾಗ ಯಶಸ್ಸು ಸಾಧ್ಯ ಎಂದು ಕರೆನೀಡಿದರು.

ಆಳ್ವಾಸ್ ಕಾಲೇಜಿನ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು ಪ್ರಾಂಶುಪಾಲೆ ಡಾ. ವನಿತಾ ಎಸ್. ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಡಾ. ನಿತೇಶ್ ವರದಿ ವಾಚಿಸಿದರು, ಡಾ. ಅಮೃತಾ ವಂದಿಸಿದರು, ರುಚಿತಾ ಕಾರ್ಯಕ್ರಮ ನಿರೂಪಿಸಿದರು.

Exit mobile version