Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾವು ಯಾವ ಪಕ್ಷದಲ್ಲಿ ದುಡಿಯು ತ್ತಿದ್ದೆವೊ ಆ ಬಗ್ಗೆ ಹೆಮ್ಮೆ ಇರಬೇಕು. ಹೆಮ್ಮೆ ಇಲ್ಲದಿದ್ದಲ್ಲಿ ಅಲ್ಲಿ ಹೆಚ್ಚು ದಿನ ಇರಲಾಗದು. ಅದೇ ರೀತಿ ಪಕ್ಷದ ನಾಯಕತ್ವದ ಮೇಲೆ ನಂಬಿಕೆ, ಗೌರವ ಹೊಂದಿರಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.

ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ದೇವಾನಂದ ಶೆಟ್ಟಿ, ದೇವಕಿ ಸಣ್ಣಯ್ಯ, ಗಣೇಶ ಶೇರೆಗಾರ್, ಅಶ್ವತ್ ಕುಮಾರ್, ಯುವ ಮುಖಂಡ ರಾದ ವಿಕಾಸ್ ಹೆಗ್ಡೆ ರೋಶನ್ ಶೆಟ್ಟಿ ಉಪಸ್ಥಿತರಿದ್ದರು. ಕೊಣಿ ನಾರಾಯಣ ಆಚಾರ್ಯ ಸ್ವಾಗತಿಸಿದರು. ವಿನೋದ್ ಕ್ರಾಸ್ತಾ ನಿರೂಪಿಸಿ, ವಂದಿಸಿದರು.

Exit mobile version