Kundapra.com ಕುಂದಾಪ್ರ ಡಾಟ್ ಕಾಂ

ಐಎಂಎ ಕುಂದಾಪುರ ಶಾಖೆಯಲ್ಲಿ ಸಿಎಂಇ ವಿಭಾಗ ವಿಷಯ ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತೀಯ ವೈದ್ಯ ಸಂಘ ಐಎಂಎ ಕುಂದಾಪುರದ ಆಶ್ರಯದಲ್ಲಿ ನಾರಾಯಣ ಹಾರ್ಟ್ ಸಿಟಿ ಬೆಂಗಳೂರು ಇವರ ಸಹಯೋಗದಲ್ಲಿ ಸಿಎಂಇ (ಮುಂದುವರಿದ ವೈದ್ಯಕೀಯ ಶಿಕ್ಷಣ)ದ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಕುಂದಾಪುರದ ಹೋಟೆಲ್ ಸಹನಾದಲ್ಲಿ ನೆರವೇರಿತು

ಸಂಪನ್ಮೂಲ ವ್ಯಕ್ತಿಗಳಾಗಿ ಡಾ ಶುಶ್ರುತ್ ಶೆಟ್ಟಿ ಭಾಗವಹಿಸಿ ‘recent advances in GI surgery and oncology’ ಬಗ್ಗೆ, ಡಾ. ಮಯೂರ್ ಶೆಟ್ಟಿ ‘ body contouring’ ಬಗ್ಗೆ, ಡಾ ಸೌರಭಾ ಕುಮಾರ್ ‘recent advances in radiation oncology ‘ಬಗ್ಗೆ ಮಾತನಾಡಿ ಚಿಂತನ ಮಂಥನ ನೆಡೆಸಿದರು.

ಐಎಂಎ ಕುಂದಾಪುರದ ಅಧ್ಯಕ್ಷ ಎಲಬು ಕೀಲು ತಜ್ಞರಾದ ಡಾ ಸಂದೀಪ ನಾವಡ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಡಾ. ಸಂದೀಪ್ ಶೆಟ್ಟಿ ಅರವಳಿಕೆ ತಜ್ಞರು ವಂದಿಸಿದರು.

Exit mobile version