Site icon Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರಿನ ಪ್ರದೀಪ್ ಕುಮಾರ್ ಅವರಿಗೆ ರಾಜ್ಯ ಮಟ್ಟದ ಕರುನಾಡ ಕಣ್ಮಣಿ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಾತೃಭೂಮಿ ಸೇವಾ ಟ್ರಸ್ಟ್ ರಿ. ತುಮಕೂರು ಇವರ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ಸೇವೆ ಗೈದವರಿಗೆ ಕೊಡ ಮಾಡುವ ರಾಜ್ಯ ಮಟ್ಟದ ಕರುನಾಡ ಕಣ್ಮಣಿ ಪ್ರಶಸ್ತಿಯನ್ನು ಬಸ್ರೂರಿನ ಪ್ರದೀಪ್ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು.

ಕ್ರೀಡೆ, ಸಾಂಸ್ಕ್ರತಿಕ,ಶೈಕ್ಷಣೀಕ, ಸಾವ೯ಜನಿಕ ಸೇವಾ ವಲಯ, ಧಾಮಿ೯ಕ ಸೇವೆಯೊಂದಿಗೆ ಸ್ವತಂತ್ರ ಸಂಶೋಧನಾ ಕಾಯ೯ದಲ್ಲಿ ತೊಡಗಿಕೊಂಡು ಇವರ ಶಾಸನ ಶೋಧ ಕಾಯ೯ದ ಒಂದು ಶಾಸನವು ಹಂಪಿ ವಿಶ್ವವಿದ್ಯಾಲಯದ ಶಾಸನ ಪ್ರಸಾರಾಂಗ ವಿಭಾಗದಲ್ಲಿ ವರದಿಯಾಗಿದೆ. ಇದರೊಂದಿಗೆ ಅನೇಕ ವೀರಗಲ್ಲು, ಶಾಸನ ಕಲ್ಲು, ಪುರಾತನ ದೇವರ ವಿಗ್ರಹವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವರು, ಹಟ್ಟಿಕುದ್ರು ಗುಜ್ಜಾಡಿ ಮನೆ ಪದ್ಮನಾಭ ಪೂಜಾರಿ ಹಾಗೂ ಉಗ್ರಾಣಿ ಮನೆ ಗಿರಿಜಾ ಪೂಜಾರಿ ದಂಪತಿಯ ದ್ವಿತೀಯ ಪುತ್ರ.

Exit mobile version