Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೊಂಕಣ ರೈಲ್ವೇ ಆರಂಭವಾದಾಗಿನಿಂದ ಇದ್ದ ಜನ ಸಾಮಾನ್ಯರು ಹಾಗೂ ದೂರ ಪ್ರವಾಸಿಗರ ನೆಚ್ಚಿನ ರೈಲಾಗಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ನಿಲುಗಡೆಯನ್ನು ಕುಂದಾಪುರದಲ್ಲಿ ರದ್ದು ಮಾಡಿರುವುದು ಸರಿಯಲ್ಲ, ಇದು ಕೊಂಕಣ್ ರೈಲ್ವೇಗೆ ಕುಂದಾಪುರದ ಮೇಲಿರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಮತ್ತೆ ಕುಂದಾಪುರ ರೈಲು ನಿಲ್ದಾಣದಲ್ಲಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡಬೇಕು ಎಂದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಆಗ್ರಹಿಸಿದೆ.

ಕೇರಳದ ತಿರುವನಂತಪುರಂನಿಂದ ಮುಂಬಯಿಗೆ ಸಂಚರಿಸುವ ರೈಲು ಇದಾಗಿದ್ದು, ಕೇರಳದಿಂದ ರಾತ್ರಿ ವೇಳೆ ಬರುವ ಕರವಾಳಿ ಭಾಗಕ್ಕೆ ಬರುವ ಏಕೈಕ ರೈಲು ಆಗಿದ್ದು ಈ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಕರಾವಳಿಯಿಂದ ಮುಂಬಿಯಿಗೆ ತೆರಳುವ ಹೆಚ್ಚಿನ ಪ್ರಯಾಣಿಕರು ಅವಲಂಬಿಸಿದ್ದರು.

ಹೆಚ್ಚು ಕಡಿಮೆ ಕುಂದಾಪುರದಷ್ಟೇ ಆದಾಯ ಹೊಂದಿರುವ ಇತರ ನಿಲ್ದಾಣಗಳ ನಿಲುಗಡೆಯನ್ನು ಹಾಗೆಯೇ ಉಳಿಸಿರುವ ಕೊಂಕಣ ರೈಲ್ವೆಯು, ಕುಂದಾಪುರದಲ್ಲಿ ಮಾತ್ರ ನೇತ್ರಾವತಿ ಎಕ್ಸ್‌ಪ್ರೆಸ್ ನಿಲುಗಡೆಯನ್ನು ರದ್ದು ಮಾಡಿ ಪ್ರವಾಸಿಗರಿಗೆ ಹಾಗೂ ಮುಂಬಯಿ ಕಡೆಗೆ ತೆರಳುವ ಯಾತ್ರಿಗಳಿಗೆ ತೊಂದರೆಯಾಗುತ್ತಿದೆ.

ಸಂಸದರಿಗೆ ದೂರು:
ಆದರೆ ಕೊಂಕಣ ರೈಲ್ವೇಯು ಇದ್ಯಾವುದನ್ನು ಗಮನಿಸದೇ, ಏಕಾಏಕಿ ಈ ನಿಲುಗಡೆ ತೆಗೆದಿರುವುದರ ಮುಂಬಯಿಗೆ ಸಂಚರಿಸುವ ರೈಲು ವಿರುದ್ಧ ಸಂಸದರಿಗೆ ದೂರು ನೀಡಿದೆ. ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಿಂದ ಬರುವ ಕರಾವಳಿ ಭಾಗಕ್ಕೆ ಬರುವ ಏಕೈಕ ಬಹಳಷ್ಟು ಕೇರಳ ಪ್ರವಾಸಿಗರು ಗೋವಾ, ಮುಂಬಯಿ ಪ್ರೆಸ್ ರೈಲು ಅನ್ನು ಕರಾವಳಿಯಿಂದ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಮುಂಬಯಿಗೆ ತೆರಳುವ ಹೆಚ್ಚಿನ ಪ್ರಯೋಜನವಾಗುತ್ತಿತ್ತು. ಪ್ರಯಾಣಿಕರು ಅವಲಂಬಿಸಿದ್ದರು. ಕುಂದಾಪುರ ರೈಲು ಪ್ರಯಾಣಿಕರ ರೈಲು ಮಂಡಳಿಯ ನೆಪ ಹೇಳಿ ಹಿತರಕ್ಷಣ ಸಮಿತಿಯು ತತ್ಕ್ಷಣವೇ ಮಾಡಿದ ಈ ಕೃತ್ಯವು ಇಲ್ಲಿನ ಜನರಿಗೆ ನಿಲುಗಡೆ ನೀಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದೆ.

Exit mobile version