Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದದಲ್ಲಿ ಪವರ್ ಜಿಮ್ ಮತ್ತು ಫಿಟ್‌ನೆಸ್ ಸೆಂಟರ್ ಶುಭಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪವರ್ ಜಿಮ್ ಮತ್ತು ಫಿಟ್‌ನೆಸ್ ಸೆಂಟರ್‌ನ ಶಾಖೆ ಉಪ್ಪುಂದದ ವೈಶಾಲಿ ಕಟ್ಟಡದಲ್ಲಿ ಬುಧವಾರ ಶುಭಾರಂಭಗೊಂಡಿತು.

ಉಪ್ಪುಂದ ಅಶ್ವಿನಿ ಕ್ಲಿನಿಕ್ ವೈದ್ಯರಾದ ಡಾ. ಪ್ರವೀಣ ಕುಮಾರ್ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಅವರು ದೇಹದ ಆರೋಗ್ಯ ಮತ್ತು ಮಾನಸಿಕ ಸ್ಥಿರತೆ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ. ಅತ್ಯಂತ ಒತ್ತಡದ ಬದುಕಿನಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಅತ್ಯಗತ್ಯ ಎಂದರು.

ದೀಪ ಬೆಳಗಿಸಿ ಮಾತನಾಡಿದ ಕಟ್ಟಡದ ಮಾಲಿಕ ಮತ್ತು ಉದ್ಯಮಿ ವಾಜುರಾಜ್ ಶೆಟ್ಟಿ, ಬೈಂದೂರು ತಾಲೂಕಿನಲ್ಲಿ ಪ್ರಸಿದ್ದಿಗೊಂಡಿರುವ ಪವರ್ ಮಲ್ಟಿ ಜಿಮ್ ಶಾಖೆ ಉಪ್ಪುಂದದಲ್ಲಿ ಆರಂಭವಾಗಿರುವುದ ಇಲ್ಲಿನ ಯುವಜನತೆಗೆ ಉತ್ತಮ ಅವಕಾಶವಾಗಿದೆ. ಸದೃಡ ದೇಹ ಹಾಗೂ ಆರೋಗ್ಯ ಜಾಗೃತಿಗಾಗಿ ನಿತ್ಯ ವ್ಯಾಯಾಮ ಅತ್ಯಗತ್ಯ ಎಂದರು.

ಪತ್ರಕರ್ತ ಅರುಣ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಆರ್.ಎಸ್ ವೆಂಚರ‍್ಸ್ ಎಂಡಿ ರಾಜೀವ್ ಕುಮಾರ್, ಪಾಲುದಾರ ಸಾಜು ಉಪಸ್ಥಿತರಿದ್ದರು. ಪವರ್ ಜಿಮ್ ಮತ್ತು ಫಿಟ್‌ನೆಸ್ ಸೆಂಟರ್‌ನ ವಿಘ್ನೇಶ್ ಸ್ವಾಗತಿಸಿದರು. ಶಿಕ್ಷಕ ಸಂದೀಪ್ ಕಾರ್ಯಕ್ರಮ ನಿರ್ವಹಿಸಿದರು.

ಪೋಟೋ – ಶಶಾಂಕ್ ಕಾರಂತ್

Exit mobile version