Kundapra.com ಕುಂದಾಪ್ರ ಡಾಟ್ ಕಾಂ

ಓಟದ ಸ್ವರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಕ್ಷಕ ನಾಗರಾಜ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸುರಭಿ ರಿ. ಬೈಂದೂರು ಸಂಸ್ಥೆಯ ವಿಶೇಷ ಸಭೆ ಇತ್ತಿಚಿಗೆ ಬೈಂದೂರು ರೋಟರಿ ಭವನದಲ್ಲಿ ಜರುಗಿತು.

ಈ ಸಂದರ್ಭ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ 50ರಿಂದ 60 ವಯೋಮಾನ ವಿಭಾಗದ 400 ಮೀಟರ್ ಓಟದ ಸ್ವರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ ಮಟ್ಟಕ್ಕೆ ಆಯ್ಕೆಯಾದ ಗಂಗಾನಾಡು ಸ.ಹಿ.ಪ್ರಾ ಶಾಲೆ ಸಹಶಿಕ್ಷಕ ನಾಗರಾಜ ಬಿ. ಅವರನ್ನು ಸುರಭಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ, ಕಾರ್ಯದರ್ಶಿ ಭಾಸ್ಕರ ಬಾಡ, ನಿರ್ದೇಶಕ ಸುಧಾಕರ ಪಿ. ಬೈಂದೂರು, ಸದಸ್ಯರಾದ ಆನಂದ ಮದ್ದೋಡಿ, ವೆಂಕಟೇಶ್ ಮಯ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.

Exit mobile version