Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಕಟ್ಟಡ ಕಾರ್ಮಿಕ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪಡುವರಿ ಗ್ರಾಮದ ಒತ್ತಿನೆಣೆ ಎಂಬಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಪಶ್ಚಿಮ ಬಂಗಾಲ ಮೂಲದ ಕಾರ್ಮಿಕ ಅಕಿಲ್ಚಂದ್ರ ಬರಾಯಿ(50) ಮೃತಪಟ್ಟಿದ್ದಾರೆ.

ನ.20ರಂದು ಅವರು ಕೋವಿಡ್ ವ್ಯಾಕ್ಸಿನೇಶನ್ ಹಾಕಿಸಿಕೊಂಡಿದ್ದು ನಂತರ ಅವರಿಗೆ ಜ್ವರ ಬಾಧಿಸಿದೆ. ಕಟ್ಟಡದ ರೂಮ್‌ನಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದವರು ನ.24ರಂದು ಬೆಳಗ್ಗೆ ಸಹ ಕಾರ್ಮಿಕ ಎಬ್ಬಿಸಿದಾಗ ಮಾತನಾಡದ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಬೈಂದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಸಹ ಕಾರ್ಮಿಕನಾರಾಯಣ ಬರ್ಮನ್ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version