Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಪುನರಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಳೆದ 6 ತಿಂಗಳುಗಳಿಂದ ತಾಂತ್ರಿಕ ಕಾರಣಗಳಿಂ ದಾಗಿ ಸ್ಥಗಿತಗೊಂಡಿದ್ದ ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿರುವ ರೈಲ್ವೆ ಟಿಕೆಟ್ ಬುಕ್ಕಿಂಗ್ ಕೇಂದ್ರ ಮತ್ತೆ ಕಾರ್ಯಾರಂಭಿಸಿದೆ.

ಸರ್ವರ್ ಡೌನ್ ಆದ ಕಾರಣಕ್ಕೆ ಆರಂಭಿಕ ಕಾರ್ಯ ಚಟು ವಟಿಕೆ ನಿಲ್ಲಿಸಿದ್ದ ಕೇಂದ್ರವು ನಂತರ ನಾನಾ ಕಾರಣಕ್ಕೆ ಗ್ರಾಹಕ ಸೇವೆಯಿಂದ ದೂರವೇ ಉಳಿದಿತ್ತು. ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಸಂಸದರು, ಕೊಂಕಣ ರೈಲ್ವೆ ನಿಗಮ ಇನ್ನಿತರರಿಗೆ ಮನವಿ ಸಲ್ಲಿಸಿದ್ದು, ಸಾರ್ವಜನಿಕರು ಸಹ ಮನವಿ ಅರ್ಪಿಸಿದ್ದರು.

ಸ್ಪಂದಿಸಿದ ಕೇಂದ್ರ ಸಚಿವೆ:
ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕುಂದಾಪುರದ ರೈಲ್ವೆ ನಿಲ್ದಾಣದ ಪಿಆರ್‌ಎಸ್ ಪ್ರಧಾನ ಅಂಚೆ ಕಚೇರಿಯಲ್ಲಿ ನಾದುರಸ್ತಿಯಲ್ಲಿರುವುದನ್ನು ಮನಗಂಡು ಸಾರ್ವಜನಿಕ ಮನವಿಗೆ ಸ್ಪಂದಿಸಿ ಸಂಬಂಧಿತ ಇಲಾಖೆಯ ಗಮನ ಸೆಳೆದ ಹಿನ್ನೆಲೆ ಯಲ್ಲಿ ಶುಕ್ರವಾರ ಟಿಕೆಟ್ ಬುಕ್ಕಿಂಗ್ ಕೇಂದ್ರ ಕಾರ್ಯಾರಂಭಿಸಿದೆ. ಅಲ್ಲದೆ ಶಾಶ್ವತವಾಗಿ ಪಿಆರ್‌ಎಸ್ ಸೆಂಟರ್‌ನ್ನು ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ರೈಲ್ವೆ ಸಚಿವ ಆಶ್ವಿನಿ ಶ್ರೀವಾಸ್ತವ್ ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.

Exit mobile version